ಪಡುವಾರಹಳ್ಳಿಯಲ್ಲಿ ದೇವರಾಜ ಅರಸು ಜಯಂತಿ ಆಚರಣೆ

Celebration of 'Devaraja Arasu Jayanti' in Paduvarahalli
Published on

ಮೈಸೂರು: ಪಡುವಾರಹಳ್ಳಿಯಲ್ಲಿ ಮಂಗಳವಾರ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ 109ನೇ ಜಯಂತಿ ಆಚರಿಸಲಾಯಿತು.

ಮೈಮುಲ್ ಮಾಜಿ ಅಧ್ಯಕ್ಷ ಕೆ. ಉಮಾಶಂಕರ್ ಮಾತನಾಡಿ, ಶೋಷಿತರ ಅಂತರಾಳದ ನಾಡಿಮಿಡಿತ ಅರಿತು ಅವರಿಗೆ ರಾಜಕೀಯ, ಸಾಮಾಜಿಕ, ಆರ್ಥಿಕ ಶಕ್ತಿ ತುಂಬುವ ಕಾರ್ಯವನ್ನು ದೇವರಾಜ ಅರಸು ಮಾಡಿದರು. ಧ್ವನಿ ಇಲ್ಲದೆವರಿಗೆ ಧ್ವನಿ ನೀಡಿ ಅವರುಗಳನ್ನು ಸಮಾಜದ ಮುಖ್ಯವಾಹಿನಿ ತರುವ ಕಾರ್ಯವನ್ನು ಮಾಡಿದರು ಎಂದರು.

ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದ ಸಂದರ್ಭ ಭೂ ಸುಧಾರಣಾ ಕಾಯ್ದೆ ಜಾರಿಗೆ ತಂದು ಉಳುವವರಿಗೆ ಭೂಮಿಯ ಹಕ್ಕು ನೀಡಿದರು. ಆ ಮೂಲಕ ವಿಮೋಚನಾ ಮಾರ್ಗ ತೋರಿಸಿ ಸಾಮಾಜಿಕವಾಗಿ ಕ್ರಾಂತಿ ಮಾಡಿದರು. ಶೋಷಿತ ಸಮುದಾಯದ ಬಗ್ಗೆ ಅವರು ಅಪಾರವಾದ ಕಾಳಜಿ ಹೊಂದಿದ್ದರು.

ಬಿಜೆಪಿ ಮುಖಂಡ ಎಲ್.ಚೌಡಪ್ಪ ಮಾತನಾಡಿ, ನಮ್ಮ ರಾಜ್ಯಕ್ಕೆ ‘ಕರ್ನಾಟಕ’ ಹೆಸರನ್ನು ಡಿ.ದೇವರಾಜ ಅರಸು ನಾಮಕರಣ ಮಾಡಿದರು. ಅಲ್ಲದೆ, ಕನ್ನಡವನ್ನು ಆಡಳಿತ ಭಾಷೆ ಮಾಡಿದ ಕೀರ್ತಿ ಅವರಿಗೆ ಸಲ್ಲಬೇಕು. ಸಾರಿಗೆ ವ್ಯವಸ್ಥೆಯನ್ನು ರಾಷ್ಟ್ರೀಕರಣ ಮಾಡಿ ಜನೋಪಯೋಗಿ ಕಾರ್ಯ ಮಾಡಿದ್ದರು ಎಂದರು.

ಬಿಜೆಪಿ ನಗರ ಎಸ್‌ಟಿ ಮೋರ್ಚಾ ಅಧ್ಯಕ್ಷ ಪಡುವಾರಹಳ್ಳಿ ಎಂ. ರಾಮಕೃಷ್ಣ, ಕಾಂಗ್ರೆಸ್ ನಗರ ಉಪಾಧ್ಯಕ್ಷ ಟಿ.ಸುಂದರ್, ನಗರ ಪಾಲಿಕೆ ಮಾಜಿ ಸದಸ್ಯ ಎಂ. ಚಿಕ್ಕವೆಂಟು, ದಿ ಮೈಸೂರು ಕೋ ಆಪರೇವ್ ಬ್ಯಾಂಕ್ ನಿರ್ದೇಶಕ ಸಿ.ರೇವಣ್ಣ, ಪ್ರಮುಖರಾದೆಸ್. ಶಿಲ್ಪಾ, ವರಲಕ್ಷ್ಮಿ, ಹರೀಶ್ ರೆಡ್ಡಿ, ಚೆಲುವರಾಜಕುಮಾರ್, ಪಿ.ಎನ್. ಬಸವರಾಜ್, ಯೋಗಾ ನರಸಿಂಹೇಗೌಡ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net