

ಕಳಸ: ಕಲಶೇಶ್ವರ ದೇವಸ್ಥಾನದಲ್ಲಿ ಮಂಗಳವಾರ ಶ್ರೀಕಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರುಕುಡಿಕೆ ಜಾರುಕಂಬ ಉತ್ಸವ ನಡೆಯಿತು.
ಸೋಮವಾರ ರುದ್ರಪಾದ ಮಠದಿಂದ ಕಲಶೇಶ್ವರ ದೇವಸ್ಥಾನಕ್ಕೆ ಶ್ರೀಕಷ್ಣನನ್ನು ಪಲ್ಲಕಿಯಲ್ಲಿ ಕರೆದುಕೊಂಡು ಬಂದು ಜಾಥ ಕರ್ಮ, ನಾಮಕರಣ, ಮೊದಲಾದ ಶಾಸ ನೆರವೇರಿಸಲಾಯಿತು. ಮಂಗವಾರ ಬಾಲಕಷ್ಣನ ಲೀಲೋತ್ಸವದ ನೆನಪಿಗಾಗಿ ವಿಟ್ಲ ಪಿಂಡಿ, ಮೊಸರುಕುಡಿಕೆ ಜಾರುಕಂಬ ಉತ್ಸವ ನಡೆಯಿತು.
ಶ್ರೀಕಷ್ಣನು ಬಾಲ್ಯದ ದಿನಗಳಲ್ಲಿ ಹಿರಿಯರು ಮದ್ದು ಗುಂಡುಗಳು ಹಾಗೂ ಶಬ್ದಕ್ಕಾಗಿ ಬಳಸುತ್ತಿದ್ದ ತುಪಾಕೆಗಳನ್ನು ನೋಡಿ ನನಗೂ ಶಬ್ದ ಬರುವ ಆಟಿಕೆ ವಸ್ತುಬೇಕು ಎಂದು ಯಶೋದೆಯಲ್ಲಿ ಹಠ ಹಿಡಿದಾಗ ಸಷ್ಟಿಯಾದ ಶಬ್ದ ಮಾಡುವ ಹಸಿರು ಪಟಾಕಿಯೇ ಪೆಟ್ಲವಾಗಿದೆ. ಕಾಲಕ್ರಮೇಣ ಇದು ಜನ್ಮಾಷ್ಟ್ಟಮಿಯ ವಿಟ್ಲಪಿಂಡಿಯ ಸಮಯದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಬಿದಿರಿನ ಕೋಲಿನಿಂದ ತಯಾರಿಸುವ ಈ ಪೆಟ್ಲಕ್ಕೆ ಅರಮರಲುಕಾಯಿ ಹಾಗೂ ಜುಮ್ಮನ ಕಾಯಿಯನ್ನು ಇದರ ನಳಿಕೆಯ ಒಳಗೆ ತೂರಿ ಹೊಡೆದರೆ ಶಬ್ದದೊಂದಿಗೆ ಹೊರಬರುತ್ತದೆ. ಈ ಸಂಪ್ರದಾದಯ ಕಲಶೇಶ್ವರ ದೇವಸ್ಥಾನದಲ್ಲಿ ಈ ಹಿಂದೆ ನಡೆಯುತ್ತಿತ್ತು. ಮಕ್ಕಳು ಮಹಿಳೆಯರು, ಪುರುಷರು ಮೊಸರುಕುಡಿಕೆಯ ದಿನ ಪೆಟ್ಲ ಹೊಡೆಯುತ್ತಿದ್ದರು. ಆದರೆ ಹತ್ತು ವರ್ಷಗಳಿಂದ ಅದು ಸ್ಥಗಿತವಾಗಿತ್ತು. ಈ ಬಾರಿ ಕರ್ನಾಟಕ ಜಾನಪದ ಪರಿಷತ್‌ನಿಂದ ಅಧ್ಯಕ್ಷ ರಜಿತ್ ಕೆಳಗೂರು ಉಸ್ತುವಾರಿಕೆಯಲ್ಲಿ ಪೆಟ್ಲ ಹೊಡೆಯುವ ಕಾರ್ಯುಕ್ರಮಕ್ಕೆ ಮರು ಚಾಲನೆ ನೀಡಲಾಯಿತು. ಮಕ್ಕಳು, ಮಹಿಳೆಯರು, ಪುರುಷರು ಒಬ್ಬರಿಗೊಬ್ಬರು ಪೆಟ್ಲ ಹೊಡೆದುಕೊಂಡು ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಶ್ರೀಕಷ್ಣ ಜನ್ಮಾಷ್ಟಮಿಯ ಮಹತ್ವ ಎಂಬ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ರಜಿತ್ ಕೆಳಗೂರು, ಪೆಟ್ಲ ಹೊಡೆಯುವುದು ಜಾನಪದ ಕಲೆ. ಇಂಥ ಕಲೆ ನಶಿಸಬಾರದು. ಇದನ್ನು ಉಳಿಸಿಕೊಂಡು ಮುಂದಿನ ಪೀಳಿಗೆ ಪರಿಚಯಿಸುವುದೇ ನಮ್ಮ ಮುಖ್ಯಉದ್ದೇಶ ಎಂದು ಹೇಳಿದರು. ಡಾ. ಜಾನಕಿ ಸುಂದರೇಶ್ ಶ್ರೀಕಷ್ಣ ಜನ್ಮಾಷ್ಟಮಿಯ ಮಹತ್ವ ತಿಳಿಸಿದರು.
ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವೆಂಕಟಸುಬ್ಬಯ್ಯ, ಸದಸ್ಯ ಕೆ.ಕೆ.ಬಾಲಕಷ್ಣ ಭಟ್, ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಪ್ರೇಮಲತಾ, ಕಜಾಪ ಸದಸ್ಯರಾದ ಪೂರ್ಣಿಮಾ ಪ್ರಮೋದ್, ಆಶಾ ರಾಘವೇಂದ್ರ, ಗಣೇಶ್ ಕುಕ್ಕೋಡು, ಪ್ರಿಯಾ ಗುರುಪ್ರಸಾದ್, ಸುಚಿತಾ ಉದಯ್ ಇತರರಿದ್ದರು.