ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮ ಆಚರಣೆ

21
Published on

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಯಶಸ್ವಿಯಾಗಿ ಒಂದು ವರ್ಷ ಅಧಿಕಾರ ಪೂರೈಸಿದ ಹಿನ್ನೆಲೆಯಲ್ಲಿ ಕಾರ್ಯಕರ್ತರು, ಅಭಿಮಾನಿಗಳು ನಗರದಲ್ಲಿ ಸೋಮವಾರ ಸಿಹಿ ವಿತರಿಸಿ ಸಂಭ್ರಮಿಸಿದರು.
ನಗರದ ನಂಜುಮಳಿಗೆ ವೃತ್ತದಲ್ಲಿ (ಕನಕ ವೃತ್ತ) ಡಾ. ಯತೀಂದ್ರ ಯುವ ಬ್ರಿಗೇಡ್ ಹಾಗೂ ಕೃಷ್ಣರಾಜ ಯುವ ಬಳಗದಿಂದ ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ ನೇತೃತ್ವದಲ್ಲಿ ಸಿಹಿ ವಿತರಿಸಿ, ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರ ಭಾವಚಿತ್ರ ಹಿಡಿದು ಗ್ಯಾರಂಟಿ ಕಾಂಗ್ರೆಸ್ ಸರ್ಕಾರ ಎಂದು ಘೋಷಣೆ ಕೂಗಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಪೂರ್ವ ಸಾಧನೆ ಮಾಡಿದ್ದು, ಅಲ್ಪ ಅವಧಿಯಲ್ಲಿ ಅಗಣಿತವಾಗಿ ಜನ ಮನ್ನಣೆ ಗಳಿಸಿದೆ, ಯಾವುದೇ ಜಾತಿ ಧರ್ಮ ಎನ್ನದೆ ಎಲ್ಲರನ್ನೂ ಸಮಾನವಾಗಿ ಕಾಣುವ ತತ್ವ ಪಾಲಿಸಿಕೊಂಡು ಬರುತ್ತಿದೆ. ಗ್ಯಾರಂಟಿ ಯೋಜನೆಗಳ ಮೂಲಕ 4.60 ಕೋಟಿ ಜನರನ್ನು ತಲುಪಿದೆ. ಬಡವರು ಮಹಿಳೆಯರು ರೈತರು ಸೇರಿದಂತೆ ಶ್ರಮಿಕ ವರ್ಗದವರನ್ನು ಸಹ ಆರ್ಥಿಕವಾಗಿ ಸಶಕ್ತನಾಗಿರಿಸಿದ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ದೇಶದಲ್ಲಿ, ಅಷ್ಟೇ ಯಾಕೆ ವಿಶ್ವದಲ್ಲಿ ಮಾದರಿಯಾಗಿದೆ ಎಂದು ಆರ್.ಮೂರ್ತಿ ಬಣ್ಣಿಸಿದರು.
ಕೆಪಿಸಿಸಿ ಸದಸ್ಯ ನಜರ್‌ಬಾದ್ ನಟರಾಜ್, ಕೆ.ಆರ್.ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ, ಮುಖಂಡರಾದ ಜಿ. ರಾಘವೇಂದ್ರ, ಡಾ. ಯತೀಂದ್ರ ಯುವ ಬ್ರಿಗೇಡ್ ಅಧ್ಯಕ್ಷ ಶಿವಕುಮಾರ್, ಸದಸ್ಯರಾದ ಲೋಕೇಶ್, ರವಿಚಂದ್ರ, ಎಸ್.ಎನ್. ರಾಜೇಶ್, ತೀರ್ಥ ಕುಮಾರ್, ಬ್ರಾಡ್ ವೇ ಕಿರಣ್, ಶಿವಕುಮಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net