ಉಡುಪಿ ಜಿಲ್ಲೆಯಲ್ಲಿ ಸಂಭ್ರಮದ ಕ್ರಿಸ್ಮಸ್​ ಆಚರಣೆ

udp-25-xmas'
Published on

ಉಡುಪಿ: ಏಸುಕ್ರಿಸ್ತರ ಜನ್ಮದಿನ ಕ್ರಿಸ್ಮಸ್​ ಹಬ್ಬವನ್ನು ಸೋಮವಾರ ಜಿಲ್ಲೆಯ ಕ್ರೆಸ್ತ ಭಾಂಧವರು ಸಂಭ್ರಮದಿಂದ ಆಚರಿಸಿದರು.

ಭಾನುವಾರ ರಾತ್ರಿ ಚರ್ಚುಗಳಲ್ಲಿ ವಿಶೇಷ ಪ್ರಾರ್ಥನೆ ಬಲಿಪೂಜೆ ನಡೆಯಿತು. ಸೋಮವಾರ ಕೆಸ್ತ ಬಾಂಧವರು ತಮ್ಮ ಮನೆಗಳಲ್ಲಿ ಹಬ್ಬ ಆಚರಣೆಯನ್ನು ಮಾಡಿದರು.ಕೆಸ್ತ ಭಾಂಧವರ ಮನೆಗಳಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು. ಮನೆಯಲ್ಲಿ ವಿಶೇಷ ಖಾದ್ಯಗಳನ್ನು ತಯಾರಿಸಿ ನೆರೆಮನೆಯವರು, ಬಂಧುಮಿತ್ರರೊಡನೆ ಊಟವನ್ನು ಸವಿದರು. ಕ್ರಿಸ್ಮಸ್​ ಹಬ್ಬದ ವಿಶೇಷ ತಿಂಡಿ ಕುಸ್ವಾರ್​ ಅನ್ನು ಪರಸ್ಪರ ವಿನಿಮಯ ಮಾಡಿಕೊಂಡು ಶುಭಾಶಯ ಕೋರಿದರು.

ಸೋಮವಾರ ಬೆಳಗ್ಗೆ ಎಲ್ಲಾ ಚರ್ಚುಗಳಲ್ಲಿ ಹಬ್ಬದ ವಿಶೇಷ ಬಲಿಪೂಜೆಗಳು ಜರುಗಿದವು. ಉಡುಪಿ ಧಮಾರ್ಧ್ಯಕ್ಷ ಡಾ. ಜೆರಾಲ್ಡ್​ ಐಸಾಕ್​ ಲೋಬೊ ಉಡುಪಿಯಲ್ಲಿ ಬಲಿಪೂಜೆಯಲ್ಲಿ ಭಾಗವಹಿಸಿ ಹಬ್ಬದ ಸಂದೇಶ ನೀಡಿದರು. ಐಸಿವೈಎಮ್​ ಸಂಘಟನೆಯ ಸದಸ್ಯರು, ಮಕ್ಕಳಿಗಾಗಿ ಗೋದಲಿ ನಿಮಾರ್ಣ ಸ್ಪರ್ಧೆಯನ್ನು ಆಯೋಜಿಸಿದ್ದು, ಮನೆಮನೆಗಳಿಗೆ ಭೇಟಿ ನೀಡಿ ಗೋದಲಿ ವೀಕ್ಷಣೆ ಮಾಡಿ ಕ್ರಿಸ್ಮಸ್​ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net