

ಲಕ್ಷೆ್ಮೕಶ್ವರ: ಪಟ್ಟಣದ ಹಿರೇಬಣದಲ್ಲಿರುವ ಜೀಣೋದ್ಧಾರಗೊಂಡ ಚಿದಂಬರೇಶ್ವರ ದೇವರ ನೂತನ ದೇವಸ್ಥಾನದಲ್ಲಿ ಗುರುವಾರ ಚಿದಂಬರೇಶ್ವರ ಜಯಂತ್ಯುತ್ಸವವನ್ನು ಸಂಪ್ರದಾಯದಂತೆ ವಿವಿಧ ಧಾರ್ವಿುಕ ಕಾರ್ಯಕ್ರಮಗಳನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಬೆಳಗ್ಗೆ ಕಾಕಡಾರತಿಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮಗಳು ಹಿರಿಯ ಋತ್ವಿಜರಾದ ಅನಂತಭಟ್ ಜೋಶಿ ಅವರ ನೇತೃತ್ವದಲ್ಲಿ ಚಿಕ್ಕಣ್ಣಭಟ್ ಜೋಶಿ, ಶ್ರೀಪಾದಭಟ್ ಜೋಶಿ, ನಾಗರಾಜ ಪೂಜಾರ, ನರಸಿಂಹಭಟ್ ಜೋಶಿ ಅವರ ಉಪಸ್ಥಿತಿಯಲ್ಲಿ ವೇದಘೊಷ ಗಳೊಂದಿಗೆ ಚಿದಂಬರ ಸ್ವಾಮಿಗೆ ರುದ್ರಾಭಿಷೇಕ ನೆರವೇರಿಸಲಾಯಿತು. ಮಧ್ಯಾಹ್ನ 12 ಗಂಟೆಗೆ ಸುಮಂಗಲೆಯರು ಹಾಗೂ ಮಹಿಳಾ ಭಜನಾ ಮಂಡಳಿ ಸದಸ್ಯರ ಸಮ್ಮುಖದಲ್ಲಿ ವಿಧಿವತ್ತಾಗಿ ಚಿದಂಬರೇಶ್ವರ ದೇವರ ತೊಟ್ಟಿಲೋತ್ಸವ ನಡೆಯಿತು. ನಂತರ ಮಹಾಮಂಗಳಾರತಿ, ಭಜನೆಗಳು ಜರುಗಿದವು.
ಸಂಜೆ 6 ಗಂಟೆಗೆ ದೇವಸ್ಥಾನದ ಆವರಣದಲ್ಲಿ ದೀಪೋತ್ಸವ ಜರುಗಿತು. ಸಾಂಪ್ರದಾಯಿಕ ಭಜನೆ ಹಾಗೂ ಸಂಗೀತ ಸೇವೆಗಳು ನಡೆದವು. ದೇವಸ್ಥಾನದ ಧರ್ಮದರ್ಶಿ ಪ್ರಕಾಶ ಕುಲಕರ್ಣಿ, ಪ್ರಸನ್ನ ಕುಲಕರ್ಣಿ ಧನಲಕ್ಷ್ಮೀ ಕುಲಕರ್ಣಿ, ಹಿರಿಯ ವಕೀಲ ವಿ.ಎಲ್.ಪೂಜಾರ, ಗೋಪಾಲ ಪಡ್ನೀಸ್, ಕೆ.ಎಸ್. ಕುಲಕರ್ಣಿ, ಅರವಿಂದ ದೇಶಪಾಂಡೆ, ಗುರುರಾಜ ಪಾಟೀಲ, ಮಹಾದೇವಗೌಡ ಪಾಟೀಲ, ಯಲ್ಲಪ್ಪ ಮಾಚೇನಹಳ್ಳಿ, ರಾಜು ಕಳ್ಳಿ, ಇತರರಿದ್ದರು.