

ರಾಯಚೂರು ಛತ್ರಪತಿ ಶಿವಾಜಿ ಮಹಾರಾಜರು ದಕ್ಷ ಆಡಳಿತಗಾರ ಆಗಿದ್ದು, ಶಿವಾಜಿಯವರ ತತ್ವಗಳಿಂದ ಯುವಜನರು ಸ್ವಾಭಿಮಾನ, ಧೈರ್ಯ ಹಾಗೂ ರಾಷÀ್ಟçಸೇವೆ ಮಾಡುವ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ಗ್ರೇಡ್-೨ ತಹಶೀಲ್ದಾರ್ ಭೀಮರಾಯ ಹೇಳಿದರು.
ನಗರದ ಪಂಡಿತ ಸಿದ್ದರಾಮ ಜಂಬಲದಿನ್ನ ರಂಗಮAದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ನಮ್ಮ ದೇಶದ ಸ್ವಾತಂತ್ರ‍್ಯದ ಕಹಳೆ ಊದಿದ ದಕ್ಷ ಆಡಳಿತಗಾರರು. ಶಿವಾಜಿ ಮಹಾರಾಜರ ತತ್ವಗಳನ್ನು ಪ್ರತಿಯೊಬ್ಬರೂ ಅನುಸರಿಸಬೇಕು. ಶಿವಾಜಿಯವರ ತತ್ವಗಳಿಂದ ಯುವಜನರು ಸ್ವಾಭಿಮಾನ, ಧೈರ್ಯ ಹಾಗೂ ರಾಷÀ್ಟçಸೇವೆ ಮಾಡುವ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದರು.
ಛತ್ರಪತಿ ಶಿವಾಜಿ ಮಹಾರಾಜರ ವ್ಯಕ್ತಿತ್ವವು ಬಹಳ ದೊಡ್ಡದಾಗಿದೆ. ಶಿವಾಜಿ ಮಹಾರಾಜರು ಅನ್ಯಾಯದ ವಿರುದ್ಧ ಹೋರಾಟ ಮಾಡಿದ ಽÃಮಂತ ನಾಯಕರು. ತಾಯಿ ಜೀಜÁಬಾಯಿಯವರಿಂದ ಒಳ್ಳೆಯ ಸಂಸ್ಕಾರ ಕಲಿತ ಶಿವಾಜಿ ಮಹಾರಾಜರು ಗುರುಗಳಾದ ಸಂತ ರಾಮದಾಸ್ ಅವರ ಮಾರ್ಗದರ್ಶನದಲ್ಲಿ ಆದರ್ಶ ರಾಜರಾಗಿ ದಕ್ಷತೆಯಿಂದ ಆಡಳಿತ ನಡೆಸಿದರು. ಮಹಿಳೆಯರಿಗೆ ಪೂಜ್ಯ ಸ್ಥಾನ ಕೊಟ್ಟ ಶಿವಾಜಿಯವರು ಭಾವೈಕ್ಯತೆಗಾಗಿ ಹಾಗೂ ಸರ್ವಧರ್ಮ ಸಮನ್ವಯತೆಗಾಗಿ ಹೋರಾಡಿದ ಶೂರರು. ಶಿವಾಜಿ ಮಹಾರಾಜರ ಜಯಂತಿಯನ್ನು ಎಲ್ಲ ಸಮಾಜದ ಜನರು ಒಗ್ಗೂಡಿ ಅರ್ಥಪೂರ್ಣವಾಗಿ ಆಚರಿಸಬೇಕಾಗಿದೆ ಎಂದರು.
ಉಪನ್ಯಾಸಕರಾಗಿ ಯುವ ಸಾಹಿತಿಗ ಈರಣ್ಣ ಬೆಂಗಾಲಿ ಅವರು ಮಾತನಾಡಿ, ಶಿವಾಜಿ ಮಹಾರಾಜರು ಅಷÀ್ಟ ದಿಗ್ಗಜರನ್ನು ಆಸ್ಥಾನದಲ್ಲಿಟ್ಟುಕೊಂಡು ದಕ್ಷ ಆಡಳಿತ ನಡೆಸಿದವರು. ಹಿಂದೂ ಸಾಮ್ರಾಜ್ಯವನ್ನು ಅತ್ಯುನ್ನತ ಸ್ಥಾನದಲ್ಲಿರುವಂತೆ ಹೋರಾಡಿದವರೇ ಛತ್ರಪತಿ ಶಿವಾಜಿಯವರು. ನೀತಿವಂತ, ವಿಚಾರಶೀಲ, ಧರ್ಮವಂತ, ಸುಶೀಲ, ಪರೋಪಕಾರಿ ರಾಜನಾಗಿದ್ದನು ಎಂದು ವರ್ಣಿಸಿದರು.
ಮೆರವಣಿಗೆಗೆ ಚಾಲನೆ
ಕಾರ್ಯಕ್ರಮದ ಮೊದಲು ಬೆಳಗ್ಗೆ ನಗರದ ಅಂಬಾದೇವಿ ದೇವಸ್ಥಾನದಿಂದ ಆರಂಭವಾದ ಛತ್ರಪತಿ ಶಿವಾಜಿ ಮಹಾರಾಜರ ಅವರ ಭಾವಚಿತ್ರ ಮೆರವಣಿಗೆಗೆ ಸಣ್ಣ ನೀರಾವರಿ ಸಚಿವರಾದ ಎನ್.ಎಸ್.ಭೋಸರಾಜು ಹಾಗೂ ಶಾಸಕ ಡಾ.ಶಿವರಾಜ ಎಸ್.ಪಾಟೀಲ್, ಪಾಲಿಕೆಯ ಅಧ್ಯಕ್ಷರಾದ ನರಸಮ್ಮ ನರಸಿಂಹಲು ಮಾಡಗಿರಿ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಽಕಾರಿಗಳು ಅವರು ಚಾಲನೆ ನೀಡಿದರು.
ಅಲ್ಲಿಂದ ಆರಂಭಗೊAಡ ಮೆರವಣಿಗೆಯು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ರಂಗಮAದಿರಕ್ಕೆ ಬಂದು ಸೇರಿತು.
ಈ ಸಂದರ್ಭದಲ್ಲಿ ಮುಖಂಡರಾದ ಹನಮಂತರಾವ್ ಜಗಪಾತಿ, ಭೀಮಣ್ಣ ಜÁದವ್, ಶಿವಾಜಿರಾವ್, ರಾಜೇಂದ್ರ ಶಿವಾಳಿ ಸೇರಿದಂತೆ ಇತರರು ಇದ್ದರು.