

ವಿಜಯಪುರ: ನಗರದ ಬಿದನೂರ ಪೆಟ್ರೋಲ್ ಪಂಪ್‌ನಲ್ಲಿ ಸಾರ್ವಜನಿಕರಿಗೆ ತಂಪು ನೀರು ಹಾಗೂ ಪಾನಕ ವಿತರಿಸುವ ಮೂಲಕ ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮ ಹಾಗೂ ಬಸವ ಜಯಂತಿ ಆಚರಿಸಲಾಯಿತು.
ಮುಖಂಡ ಉಮೇಶ ವಂದಾಲ ಮಾತನಾಡಿ, ಹೇಮರಡ್ಡಿ ಮಲ್ಲಮ್ಮ ಹಾಗೂ ಮಹಾತ್ಮ ಬಸವೇಶ್ವರರು ಮಹಾನ್ ಶರಣರು. ಮನುಕುಲದ ಒಳಿತಿಗಾಗಿ ಶ್ರಮಿಸಿದವರು. ಅಂಥ ಮಹಾತ್ಮರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳೋಣ ಎಂದರು.
ಪಾಲಿಕೆ ಸದಸ್ಯ ಶಿವರುದ್ರ ಬಾಗಲಕೋಟ, ಮಹೇಶ ಬಿದನೂರ, ಶಾಂತಗೌಡ ಪಾಟೀಲ, ಸಂಜು ಮಸೂತಿ, ಸಿದ್ಧನಗೌಡ ಯಾಳವಾರ ಮತ್ತಿತರರಿದ್ದರು.