

ವಿಜಯಪುರ: ನಗರದ ಆರಾಧ್ಯದೈವ ಶ್ರೀ ಸಿದ್ಧೇಶ್ವರ ಸಂಕ್ರಮಣ ಜಾತ್ರೆ ಅಂಗವಾಗಿ ಭಾನುವಾರ ಸಿದ್ಧೇಶ್ವರ ದೇವಸ್ಥಾನದ ಆವರಣದಲ್ಲಿ ನಂದಿ ಧ್ವಜಗಳಿಗೆ ಪೂಜೆ ಸಲ್ಲಿಸಲಾಯಿತು. ಸಂಸ್ಥೆ ಅಧ್ಯಕ್ಷ, ಶಾಸಕ ಬಸನಗೌಡ ಪಾಟೀಲ ಯತ್ನಾಳ ಸೇರಿ ಸಂಸ್ಥೆ ಪದಾಧಿಕಾರಿಗಳು, ಜಾತ್ರಾ ಸಮಿತಿ ಸದಸ್ಯರು ಹಾಗೂ ಭಕ್ತರು ಅಲಂಕರಿಸಿದ ನಂದಿ ಧ್ವಜಗಳಗೆ ವಿಶೇಷ ಪೂಜೆ ನೆರೆವೇರಿಸಿದರು.
ಅರ್ಚಕರಾದ ಸಿದ್ದಯ್ಯ ಹಿರೇಮಠ, ಈರಯ್ಯ ಹಿರೇಮಠ, ನೀಲಕಂಠಯ್ಯ ಪೂಜಾರಿ, ಮುರಗಯ್ಯ ಗಚ್ಚಿನಮಠ ನಂದಿಧ್ವಜಗಳ ಮಂತ್ರೂಷ ಮೊಳಗಿಸಿದರು.
ನಂತರ ದೇವಸ್ಥಾನದ ಆವರಣದಿಂದ ಆರಂಭಗೊಂಡ ನಂದಿ ಧ್ವಜಗಳ ಮೆರವಣಿಗೆ ಗಣಪತಿ ಚೌಕ, ಗಾಂಧಿ ಚೌಕ, ಕಿರಾಣಿ ಬಜಾರ್, ಸರಾಫ್ ಬಜಾರ್ ಮೂಲಕ ಲಿಂಗದ ದೇವಾಲಯಕ್ಕೆ ತಲುಪಿತು. ಅಲ್ಲಿನ 770 ಲಿಂಗಗಳಿಗೆ ಎಣ್ಣೆ ಮಜ್ಜನದೊಂದಿಗೆ ಅಭಿಷೇಕ ನಡೆಯಿತು. ನಂತರ ಅಲ್ಲಿಂದ ಎಪಿಎಂಸಿ ರಸ್ತೆಯಲ್ಲಿರುವ ಶ್ರೀ ನೀಲಕಂಠೇಶ್ವರ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿ ಬಳಿಕ ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ಪುನ@ ನಂದಿ ಧ್ವಜಗಳ ಉತ್ಸವ ಸಿದ್ಧೇಶ್ವರ ದೇವಸ್ಥಾನಕ್ಕೆ ಆಗಮಿಸಿತು.
ರಾತ್ರಿ ವಿವಿಧ ಭಜನಾ ತಂಡಗಳಿಂದ ಭಜನಾ ಪದಗಳು ನೆರವೇರಿದವು. ಸಂಸ್ಥೆ ಉಪಾಧ್ಯಕ್ಷ ಸಂಗು ಸಜ್ಜನ, ಚೇರ್ಮನ್ ಬಸಯ್ಯ ಹಿರೇಮಠ, ಕಾರ್ಯದರ್ಶಿಗಳಾದ ಸದಾನಂದ ದೇಸಾಯಿ, ಬಿ.ಎಸ್. ಸುಗೂರ, ಜಂಟಿ ಕಾರ್ಯದರ್ಶಿ ಎಂ.ಎಂ. ಸಜ್ಜನ, ಕೋಶಾಧ್ಯಕ್ಷ ಶಿವಾನಂದ ನೀಲಾ, ಜಾತ್ರಾ ಸಮಿತಿಯ ಗುರು ಗಚ್ಚಿನಮಠ, ಅಮೃತ ತೋಸನಿವಾಲ್, ಎಸ್.ಎಂ. ಪಾಟೀಲ, ಪಾಲಿಕೆ ಸದಸ್ಯರಾದ ರಾಹುಲ್ ಜಾಧವ, ಪ್ರೇಮಾನಂದ ಬಿರಾದಾರ, ಶಿವರುದ್ರ ಬಾಗಲಕೋಟ, ಎಸ್.ಸಿ. ಉಪ್ಪಿನ, ಸದಾಶಿವ ಗುಡ್ಡೋಡಗಿ, ಸುರೇಶ ಇಟ್ಟಗಿ, ಎಸ್.ಎಚ್. ನಾಡಗೌಡ, ಎಂ.ಎಸ್. ಕರಡಿ, ಎನ್.ಎಂ. ಗೋಲಾಯಿ, ವಿಜಯಕುಮಾರ ಡೋಣಿ, ಬಸವರಾಜ ಗಣಿ, ಸುಧೀರ ಚಿಂಚಲಿ, ರಮೇಶ ಹಳ್ಳದ, ಸಾಯಿಬಣ್ಣ ಭೊವಿ, ಮಲಕಪ್ಪ ಗಾಣಿಗೇರ, ನಾಗಪ್ಪ ಗುಗ್ಗರಿ, ಮಹಾದೇವ ಹತ್ತಿಕಾಳ, ಪುಟ್ಟು ಸಾವಳಗಿ, ಎಂ.ಎಸ್. ರುದ್ರಗೌಡರ, ಶ್ರೀಮಂತ ಜಂಬಗಿ, ಪ್ರವಿಣ ಬಿಜ್ಜರಗಿ, ರಾಜು ಮಗಿಮಠ, ಈರಣ್ಣ ಪಾಟೀಲ, ದ್ಯಾಮಗೊಂಡ ಬೆನಕನಳ್ಳಿ, ಮಲ್ಲಿಕಾರ್ಜುನ ಹಕ್ಕಾಪಕ್ಕಿ, ಬಸವರಾಜ ಗಣಿ, ರಾಜುಗೌಡ ಪೋಲಿಸ್ಪಾಟೀಲ, ಲಕ್ಷ$್ಮಣ ಜಾಧವ, ಆನಂದಗೌಡ ಪಾಟೀಲ, ಬಸವರಾಜ ಬಿರಾದಾರ ಮತ್ತಿತರರಿದ್ದರು.
ಸೋಮವಾರ ಮಧ್ಯಾಹ್ನ 12.30ಕ್ಕೆ ಶ್ರೀ ಸಿದ್ಧೇಶ್ವರ ದೇವಸ್ಥಾನ ಮುಂಭಾಗದಲ್ಲಿ ಅಕ್ಷತಾ ಹಾಗೂ ಭೋಗಿ ಕಾರ್ಯಕ್ರಮ ನಂತರ ಮಹಾಪ್ರಸಾದ ನಡೆಯಲಿದ್ದು, ಸಂಜೆ ಮನರಂಜನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.