ದೇವಲಗಾಣಗಾಪುರ ವಲಯದಲ್ಲಿ ಸಂಭ್ರಮ

PH 04
Published on

ದೇವಲಗಾಣಗಾಪುರ: ಗ್ರಾಮ ಸೇರಿ ವಲಯದಲ್ಲಿ ಬುಧವಾರ ಸಂಭ್ರಮದಿAದ ಕನ್ನಡ ರಾಜ್ಯೋತ್ಸವ ನಡೆಯಿತು. ಬಿದನೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಮುಖ್ಯಗುರು ಸುಧಾ ಕುಲಕರ್ಣಿ ಧ್ವಜಾರೋಹಣ ನೆರವೇರಿಸಿದರು.

ಪ್ರಾಥಮಿಕ ಶಾಲೆಯ ಮುಖ್ಯಗುರು ರಾಘವಾಚಾರಿ ಜೋಶಿ ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಬಂದರವಾಡದ ಸರ್ಕಾರಿ ಪ್ರೌಢಶಾಲೆಯಲ್ಲಿ ಮುಖ್ಯಗುರು ಮೀರಾ ಪಟೇಲ್, ಸ್ಟೇಷನ್ ಗಾಣಗಾಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ಸಮೀರ್ ಪಟೇಲ್, ಹಸರಗುಂಡಗಿಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ಶಿವಾನಂದ, ಅಂಕಲಗಾ ಸರ್ಕಾರಿ ಪ್ರೌಢಶಾಲೆಯಲ್ಲಿ ಎಚ್‌ಎಂ ಗಿರೀಶ್ ಕಡ್ಲೇವಾಡ ಧ್ವಜಾರೋಹಣ ನೆರವೇರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net