

ಸಿದ್ದಾಪುರ: ಯೂತ್ ಕಾಂಗ್ರೆಸ್‌ನ ಆಂತರಿಕ ಚುನಾವಣೆಯ ಫಲಿತಾಂಶ ಶುಕ್ರವಾರ ಪ್ರಕಟಗೊಂಡಿದ್ದು, ಕೊಡಗು ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿ 4830 ಮತ ಪಡೆದು ಹಕೀಂ ಸುಂಟ್ಟಿಕೊಪ್ಪ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಕಿಂಗ್ ಮೇಕರ್ಸ್ ತಂಡ ಸುಂಟ್ಟಿಕೊಪ್ಪದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿತು.
ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿ ಗೆಲುವು ಸಾಧಿಸಿರುವ ಹಕೀಂ ಅವರಿಗೆ ಕಿಂಗ್ ಮೇಕರ್ಸ್ ತಂಡದ ಸದಸ್ಯರು ಶಾಲು ಹೊದಿಸಿ ಸನ್ಮಾನಿಸಿ, ವಿಶೇಷವಾಗಿ ಹಾಲಿನಭಿಷೇಕ ಮಾಡಿದರು.
ಈ ಸಂದರ್ಭ ಮಾತಾನಾಡಿದ ಹಕೀಂ ಸುಂಟ್ಟಿಕೊಪ್ಪ, ನನ್ನ ಗೆಲುವು ಪ್ರತಿಯೊಬ್ಬರ ಗೆಲುವಾಗಿದೆ. ಯುವ ಕಾಂಗ್ರೆಸ್‌ನ ಆಂತರಿಕ ಚುನಾವಣೆಯಲ್ಲಿ ನನ್ನ ಗೆಲುವಿಗೆ ಶ್ರಮಿಸಿದ ಪ್ರತಿಯೊಬ್ಬರಿಗೂ ಪ್ರೀತಿಯ ಧನ್ಯವಾದ ಎಂದರು.
ಸಮಾಜ ಸೇವಕ ಫಾಝಿಲ್, ಕಿಂಗ್ ಮೇಕರ್ಸ್ ತಂಡದ ಗೂಡ, ಅಬ್ಬಾಸ್, ರಮ್ಮಿ, ತನ್ಸೀ, ಎನ್‌ಎಸ್‌ಯುಐ ಜಿಲ್ಲಾ ಉಪಾಧ್ಯಕ್ಷ ಹಾರಿಸ್, ಕಾಂಗ್ರೆಸ್ ಕಾರ್ಯಕರ್ತರಾದ ಬಶೀರ್, ರಫೀಕ್, ಸಾದಿಕ್, ಅಝರ್, ನಿಸಾರ್, ಅಮೀನ್, ಬಶೀರ್, ರಮೀಸ್ ಇದ್ದರು.