ಚಂದ್ರಯಾನ-3ರ ಯಶಸ್ಸಿಗೆ ಸಂಭ್ರಮೋತ್ಸವ

24ANKOLA2 CHADRAYANA
Published on

ಅಂಕೋಲಾ: ಮನುಕುಲದ ಏಳಿಗೆಗಾಗಿ ನಿರಂತರ ಪರಿಶ್ರಮದಿಂದ ಇಸ್ರೊ ವಿಜ್ಞಾನಿಗಳು ಚಂದ್ರನ ದಕ್ಷಿಣ ಭಾಗದಲ್ಲಿಯೇ ಅಧ್ಯಯನಕ್ಕೆ ವಿಕ್ರಂ ಲ್ಯಾಂಡರ್ ಚಂದ್ರಯಾನ-3 ಅನ್ನು ಇಳಿಸಿ ಯಶಸ್ವಿಯಾಗಿದ್ದಾರೆ ಎಂದು ಕೆ.ಎಲ್. ಇ.ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸ ಮಂಜುನಾಥ ಇಟಗಿ ಹೇಳಿದರು.

ಇಲ್ಲಿಯ ಕೆಎಲ್​ಇ ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯದ ವಿಜ್ಞಾನ ಸಂಘದಡಿ ಜರುಗಿದ ಚಂದ್ರಯಾನ-3 ಯಶಸ್ಸಿನ ಸಂಭ್ರಮಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಮ್ಮ ವಿಜ್ಞಾನಿಗಳು ಇಡಿ ಜಗತ್ತು ಇಂದು ಭಾರತೀಯ ಬಾಹ್ಯಾಕಾಶ ಸಂಸ್ಥೆಯನ್ನು ಬೆರಗುಗಣ್ಣಿನಿಂದ ನೋಡುವಂತೆ ಮಾಡಿದ್ದು, ಪ್ರತಿಯೊಬ್ಬ ಭಾರತೀಯನು ಹೆಮ್ಮೆ ಪಡುವ ದಿನವಾಗಿದೆ ಎಂದರು.

ವಿಜ್ಞಾನ ಸಂಘದ ಉಪಾಧ್ಯಕ್ಷ ರಾಘವೇಂದ್ರ ಅಂಕೋಲೆಕರ ಮಾತನಾಡಿ, ಕಳೆದ 50 ವರ್ಷಗಳಿಂದ ಚಂದ್ರನ ಮೇಲೆ ಕೆಲವೇ ದೇಶಗಳು ಅಧ್ಯಯನ ಮಾಡುತ್ತ ಬಂದಿವೆ. ಅವುಗಳಲ್ಲಿ ಭಾರತವು ಯಶಸ್ವಿ ದೇಶಗಳಲ್ಲಿ ಒಂದಾಗಿದೆ. ಮುಂದಿನ ದಿನಗಳಲ್ಲಿ ಚಂದ್ರನಲ್ಲಿರುವ ಸಂಪನ್ನೂಲಗಳ ಅಧ್ಯಯನಕ್ಕೆ ಸಹಕಾರಿಯಾಗಲಿದೆ ಎಂದರು.

ಪ್ರಶಿಕ್ಷಣಾರ್ಥಿಗಳಾದ ಮನೋಜ ಗೌಡ, ಪ್ರತೀಕ ನಾಯಕ ಚಂದ್ರಯಾನದ ವಿಶೇಷತೆಗಳ ಕುರಿತು ಮಾತನಾಡಿದರು.

ಉಪನ್ಯಾಸಕಿ ಪ್ರವೀಣಾ ನಾಯಕ ಹಾಗೂ ಕಾರ್ಯದರ್ಶಿ ಉನ್ನತಿ ನಾಯಕ, ಇತರರಿದ್ದರು. ಸಂಪ್ರಿಯಾ ಎಸ್. ಸಂಗಡಿಗರು ಪ್ರಾರ್ಥಿಸಿದರು. ಶ್ವೇತಾ ಪಟಗಾರ, ರಕ್ಷಾ ಹೊಸಮನೆ ಹಾಗೂ ದೀಪಾಲಿ ನಾಯಕ ಕಾರ್ಯಕ್ರಮ ನಿರ್ವಹಿಸಿದರು. ಉಪನ್ಯಾಸಕಿಯರಾದ ಅಮ್ರಿನಾಜ್ ಶೇಖ್, ಪೂರ್ವಿ ಹಳ್ಗೇಕರ ಹಾಗೂ ಪ್ರಶಿಕ್ಷಣಾರ್ಥಿಗಳು ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net