

ಬೆಳಗಾವಿ : ಇಸ್ರೋದ ಬಹುನಿರೀಕ್ಷಿತ ಚಂದ್ರಯಾನ-3 ಚಂದ್ರನ ಅಂಗಳದಲ್ಲಿ ಬುಧವಾರ ಸಂಜೆ ಯಶಸ್ವಿ ಲ್ಯಾಂಡ್ ಹಿನ್ನೆಲೆ ಕನ್ನಡಪರ ಸಂಘಟನೆ ಹಾಗೂ ಬಿಜೆಪಿ ಕಾರ್ಯಕರ್ತರು ಬೆಳಗಾವಿಯಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ಸದಾಶಿವ ನಗರದ ಬಿಜೆಪಿ ಮಹಾನಗರ ಕಚೇರಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ರಾಷ್ಟ್ರ ಧ್ವಜ ಪ್ರದರ್ಶನದ ಜತೆಗೆ ರಾಷ್ಟ್ರಗೀತೆ ಹಾಡಿ ಸಂಭ್ರಮಪಟ್ಟರೇ, ಶಿವಬಸವ ನಗರದಲ್ಲಿ ನಾಗನೂರು ರುದ್ರಾಕ್ಷಿಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ ನೇತೃತ್ವದಲ್ಲಿ ಸಂಭ್ರಮಾಚರಣೆ ಮಾಡಿದ ಕರವೇ ಕಾರ್ಯಕರ್ತರು ಇಸ್ರೋ ವಿಜ್ಞಾನಿಗಳ ಪರ ಘೋಷಣೆ ಕೂಗಿ ಜೈಕಾರ ಹಾಕಿದರು.
ಈ ಸಂದರ್ಭದಲ್ಲಿ ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ, ಮಹಾದೇವ ತಳವಾರ, ಗಣೇಶ ರೋಕಡೆ, ವಿನಾಯಕ ಬುವಿ ಸೇರಿದಂತೆ ಮತ್ತಿತರರಿದ್ದರು.