ಹುಲಿಗೆಮ್ಮ ದೇವಸ್ಥಾನದಲ್ಲಿ ಉಡಿತುಂಬುವ ಕಾರ್ಯಕ್ರಮ

h4-huligemma
Published on

ಹುಬ್ಬಳ್ಳಿ: ಆಷಾಢಮಾಸ ನಿಮಿತ್ತ ಇಲ್ಲಿನ ಅರವಿಂದ ನಗರದ ಹುಲಿಗೆಮ್ಮ ದೇವಿ ದೇವಸ್ಥಾನದಲ್ಲಿ ಮಂಗಳವಾರ ದೇವತೆಗಳು, ಮುತ್ತೈದೆಯರಿಗೆ ಉಡಿತುಂಬುವ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಬ್ರಾಹ್ಮೀ ಮುಹೂರ್ತದಲ್ಲಿ ದೇವಿಯರಿಗೆ ನವವಿಧಸ್ನಾನ, ಮಹಾಭಿಷೇಕ, ವಿಶೇಷ ಪುಷ್ಪಾಲಂಕಾರದೊಂದಿಗೆ ಉದಯಪೂಜೆ ಕೈಂಕರ್ಯಗಳನ್ನು ನೆರವೇರಿಸಲಾಯಿತು. ನಂತರ ನಗರ ದೇವತೆಗಳಿಗೆ ಎಣ್ಣೆ-ದೀಪ ಕೊಟ್ಟು ಉಡಿತುಂಬಿ ಬಂದ ನಂತರ ಮುತ್ತೈದೆಯರಿಗೆ ಉಡಿ ತುಂಬಿಸಿ ಅವರಿಂದ ಶ್ರೀ ದೇವಿಯವರಿಗೆ ಆರತಿ ಎತ್ತಿಸಲಾಯಿತು. ಮಾತೋಶ್ರೀ ಅಮ್ಮನವರ ಸಾನ್ನಿಧ್ಯದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಮೇಯರ್ ವೀಣಾ ಬರದ್ವಾಡ ಅವರನ್ನು ಸನ್ಮಾನಿಸಲಾಯಿತು. ನಂತರ ಅನ್ನಸಂತರ್ಪಣೆ ಜರುಗಿತು.

ಪ್ರಮುಖರಾದ ತೋಟಪ್ಪ ನಿಡಗುಂದಿ, ಮಹೇಶ ದಾಬಡೆ, ಅಶೋಕ ವಾಲ್ಮೀಕಿ, ಚೇತನ ಬರದ್ವಾಡ, ವಿರೂಪಾಕ್ಷಿ ಚಲವಾದಿ, ಪ್ರಕಾಶ ಅರಗಂಜಿ, ಉಮಾಕಾಂತ ಭಾಂಡಗೆ, ಹನುಮಂತಪ್ಪ ಕಡಕೋಳ, ದಿನೇಶ ನಿಡಗುಂದಿ, ಶ್ರೀಧರ ನಿಡಗುಂದಿ, ಪರಶುರಾಮ ಸುಳ್ಳದ, ಯಲ್ಲಪ್ಪ ಕೋಸಗಿ, ನಾಗರಾಜ ಕಟ್ಟಿ, ದೇವಸ್ಥಾನದ ಪ್ರಧಾನ ಅರ್ಚಕ ರವಿಕುಮಾರ ಮಡ್ಡಿ, ಸುನಂದಾಬಾಯಿ, ಅನುಸೂಯಾ ಚೌಗಲೆ, ಶಾಂತಾ ಗಡಾದ, ಅನಿತಾ ಬಾಣದ, ಅನುಪಮಾ ಅಕ್ಕೂರ, ಶಾರದಾ ಪಾನಘಂಟಿ, ಅಕ್ಷರಾ ರೂಗಿ, ಸವಿತಾ ಮಾಸಣಗಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net