ಮೇಲ್ಪಾಲ್ ಗಣೇಶೋತ್ಸವಕ್ಕೆ ಸಂಭ್ರಮದ ತೆರೆ

bhr 4 (3)
Published on

ಬಾಳೆಹೊನ್ನೂರು: ಕರ್ಕೇಶ್ವರ ಗ್ರಾಮದ ಮೇಲ್ಪಾಲ್‌ನ ಶ್ರೀ ವಿದ್ಯಾಗಣಪತಿ ಸೇವಾ ಸಮಿತಿಯ 48ನೇ ವರ್ಷದ ಗಣೇಶೋತ್ಸವಕ್ಕೆ ಸೋಮವಾರ ವಿಜೃಂಭಣೆಯ ತೆರೆ ಬಿದ್ದಿತು.

48ನೇ ವರ್ಷದ ಗಣೇಶೋತ್ಸವದ ಅಂಗವಾಗಿ ಚತುರ್ಥಿಯಂದು ಗಣೇಶ ವಿಗ್ರಹ ಪ್ರತಿಷ್ಠಾಪಿಸಿ ಆರು ದಿನ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ, ವಿಶೇಷ ಪೂಜಾ ಸೇವೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಅಂತಿಮ ದಿನವಾದ ಮಂಗಳವಾರ ಗಣಪತಿಗೆ ಪೂಜೆ, ಮಹಾ ಮಂಗಳಾರತಿ ನೆರವೇರಿಸಿ ಭಕ್ತರಿಗೆ ತೀರ್ಥ ಪ್ರಸಾದ ವಿನಿಯೋಗ, ಅನ್ನ ಸಂತರ್ಪಣೆ ಮಾಡಲಾಯಿತು. ನಂತರ ಗಣಪತಿ ವಿಗ್ರಹವನ್ನು ಆಕರ್ಷಕ ಅಲಕೃಂತ ವಾಹನದಲ್ಲಿ ಕುಳ್ಳಿರಿಸಿ ಚಲಿಸುವ ಆರ್ಕೆಸ್ಟ್ರಾ, ವಿವಿಧ ವಾದ್ಯ ಗೋಷ್ಠಿ, ವೇಷಭೂಷಣಗಳೊಂದಿಗೆ ಮೆರವಣಿಗೆ ನಡೆಸಿ ಮೇಲ್ಪಾಲ್ ಹಳ್ಳದಲ್ಲಿ ವಿಸರ್ಜಿಸಲಾಯಿತು.

ಸಮಿತಿ ಅಧ್ಯಕ್ಷ ಎಂ.ನಾರಾಯಣ, ಉಪಾಧ್ಯಕ್ಷ ಎ.ಸಿ.ಕೃಷ್ಣಮೂರ್ತಿ, ಕಾರ್ಯದರ್ಶಿ ಭಾಸ್ಕರ್, ಖಜಾಂಚಿ ಬಿದ್ದಪ್ಪ, ಸದಸ್ಯರಾದ ಎಂ.ಆರ್.ದಿನಕರ್, ರಾಜೇಶ್ ಕೇಶವತ್ತಿ, ಶಶಿಕುಮಾರ್, ಸುದರ್ಶನ್, ಎಚ್.ಟಿ.ರಾಜು, ಸುಚಿತ ಹೆಗ್ಡೆ, ನಂದಿನಿ ರಾಜೇಶ್, ರಜಿತ್, ಮಂಜುನಾಥ್ ತುಪ್ಪೂರು, ನಾರಾಯಣಶೆಟ್ಟಿ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net