ಹಿರಿಯೂರು ತೇರುಮಲ್ಲೇಶ್ವರ ಜಾತ್ರೆ ಸರಳ ಆಚರಣೆ ನಿರ್ಧಾರ

HYR JATRE 05
Published on

ಹಿರಿಯೂರು: ಕೋವಿಡ್ ಮಾರ್ಗಸೂಚಿಯಂತೆ ಸರಳವಾಗಿ ತೇರುಮಲ್ಲೇಶ್ವರ ಸ್ವಾಮಿ ಜಾತ್ರೋತ್ಸವ ಆಚರಿಸಲಾಗುವುದು ಎಂದು ತಹಸೀಲ್ದಾರ್ ಶಿವಕುಮಾರ್ ತಿಳಿಸಿದರು.

ಕಳೆದ ಎರಡು ವರ್ಷ ಅಗತ್ಯ ಮುಂಜಾಗ್ರತಾ ಕ್ರಮಕೈಗೊಂಡು ಜಾತ್ರೆ, ಧಾರ್ಮಿಕ ಕಾರ್ಯ ನೆರವೇರಿದ್ದು, ಪ್ರಸಕ್ತ ವರ್ಷ ಫೆ.6ರಿಂದ 21ರ ವರೆಗೆ ಜಾತ್ರೋತ್ಸವ ಜರುಗಲಿದೆ. ಫೆ.16ಕ್ಕೆ ದೊಡ್ಡ ಉತ್ಸವ, 17ರಂದು ಬ್ರಹ್ಮ ರಥೋತ್ಸವ, 19ರಂದು ಐತಿಹಾಸಿಕ ಕರ್ಪೂದಾರತಿ ಧಾರ್ಮಿಕ ಕಾರ್ಯ ನೆರವೇರಲಿದೆ ಎಂದು ಮಾಹಿತಿ ನೀಡಿದರು.

ಜಿಪಂ ಮಾಜಿ ಸದಸ್ಯ ಆರ್.ನಾಗೇಂದ್ರನಾಯ್ಕ್ ಮಾತನಾಡಿ, ರಥದ ಮುಕ್ತಿ ಬಾವುಟ ಹರಾಜಿನಲ್ಲಿ ಸಂಗ್ರಹವಾಗುವ ಹಣವನ್ನು ದೇಗುಲದ ಜೀರ್ಣೋದ್ಧಾರಕ್ಕೆ ಬಳಸಬೇಕು ಎಂದು ಸಲಹೆ ನೀಡಿದರು.

ನಗರಸಭೆ ಅಧ್ಯಕ್ಷೆ ಶಂಷುನ್ನೀಸಾ ಮಾತನಾಡಿ, ಜಾತ್ರೋತ್ಸವಕ್ಕೆ ಅಗತ್ಯ ಸಹಕಾರ ನೀಡಲಾಗುವುದು ಎಂದರು.

ನಗರಸಭೆ ಉಪಾಧ್ಯಕ್ಷ ಪ್ರಕಾಶ್, ಆಯುಕ್ತ ಉಮೇಶ್, ಸಿಪಿಐ ಶಿವಕುಮಾರ್, ಜಿ.ಎಲ್.ಮೂರ್ತಿ, ಕೇಶವಮೂರ್ತಿ, ರಾಜು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net