ಸಂಭ್ರಮದ ಚಿದಂಬರ ಪಲ್ಲಕ್ಕಿ ಉತ್ಸವ

oppo_2
oppo_2
Published on

ಮುರಗೋಡ: ಗ್ರಾಮದಲ್ಲಿ ಶ್ರಾವಣ ಮಾಸದ ಅಂಗವಾಗಿ ಕೆಂಗೇರಿ ಶಿವ ಚಿದಂಬರೇಶ್ವರ ಮಠದ ದಿವಾಕರ ದೀತ ಸ್ವಾಮೀಜಿ ಸಾನ್ನಿಧ್ಯದಲ್ಲಿ ಚಿದಂಬರ ಮೂರ್ತಿ ಪಲ್ಲಕಿ ಉತ್ಸವ ಶನಿವಾರ ಜರುಗಿತು. ವಿವಿಧ ವಾದ್ಯಮೇಳದೊಂದಿಗೆ ಅಲಂಕೃತಗೊಂಡ ಪಲ್ಲಕಿ ಉತ್ಸವ ಶ್ರೀಮಠದಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಮೆರವಣಿಗೆಯುದ್ದಕ್ಕೂ ಪಟಾಕಿ, ಸಿಡಿ ಮದ್ದು ಹಾರಿಸಿದ ಭಕ್ತರು ಶ್ರೀಗಳ ಪಾದುಕೆಗೆ ಭಕ್ತಿಸೇವೆ ಸಲ್ಲಿಸಿದರು. ಪಾಂಡುರಂಗ ದೀತ ಸ್ವಾಮೀಜಿ, ಮಹೇಶ ದೇಶಪಾಂಡೆ, ವಿನಾಯಕ ದೂಡವಾಡ, ಪ್ರಭಾಕರ ದೀತ, ಚಿದಂಬರ ತೂರಗಲ್ಲ, ಗುಂಡನ್ಣ ಕುಲಕರ್ಣಿ, ಪ್ರಶಾಂತಭಟ್ಟ ಹಾವನೂರ, ಮಲ್ಲಯ್ಯ ಮಾಸ್ತಮರಡಿ, ಮಲ್ಲಿಕಾರ್ಜುನ ಹೂಗಾರ, ಬಸವರಾಜ ಮರಮಣ್ಣವರ, ಶ್ಯಾಮ ಹಟ್ಟಿಹೊಳಿ, ಬಸವರಾಜ ನೇಸರ್ಗಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net