

ವಿಜಯವಾಣಿ ಸುದ್ದಿಜಾಲ ಉಡುಪಿ
ದೆಹಲಿಯ ಮುಖ್ಯಮಂತ್ರಿಯಾಗಿ ಬಿಜೆಪಿಯ ರೇಖಾ ಗುಪ್ತಾ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಕಡಿಯಾಳಿಯಲ್ಲಿರುವ ಜಿಲ್ಲಾ ಬಿಜೆಪಿ ಕಚೇರಿ ಮುಂಭಾಗದಲ್ಲಿ ಉಡುಪಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಶುಕ್ರವಾರ ಸಂಭ್ರಮ ಆಚರಿಸಲಾಯಿತು.
ರಸ್ತೆಯಲ್ಲಿ ಪಟಾಕಿ ಸಿಡಿಸಿ, ಸಿಹಿ ವಿತರಿಸುವ ಮೂಲಕ ಮಹಿಳಾ ಪದಾಧಿಕಾರಿಗಳು ಸಂತಸ ವ್ಯಕ್ತಪಡಿಸಿದರು.
ಉಡುಪಿ ನಗರಸಭಾ ಉಪಾಧ್ಯಕ್ಷೆ ರಜನಿ ಹೆಬ್ಬಾರ್, ಜಿಲ್ಲಾ ಮಹಿಳಾ ಮೋರ್ಚಾದ ಸುಜಾಲಾ ಸತೀಶ್, ತಾರಾ ಆಚಾರ್ಯ, ವಿದ್ಯಾ ಶ್ಯಾಮ್, ಸುಮಾ ಆರ್. ಕುಮಾರ್, ಲೀಲಾ ಆರ್. ಅಮೀನ್, ಕವಿತಾ ಪೂಜಾರಿ, ಲೀನಾ, ನಗರ ಮಹಿಳಾ ಮೋರ್ಚಾ ಪದಾಧಿಕಾರಿಗಳಾದ ಸುಧಾ ಪೈ, ಯಶೋದಾ ರಾಜೇಂದ್ರ, ಸರೋಜಾ ಶೆಣೈ, ಆಶಾಲತಾ ಹೆಗ್ಡೆ, ದೀಪಾ ಪೈ, ಪ್ರಜ್ಞಾ ಶೆಟ್ಟಿ ಇತರರಿದ್ದರು.