

ಕೋಟ: ಶಿಕ್ಷಕರ ದಿನಾಚರಣೆ ಪ್ರಯುಕ್ತ ಕುಂಭಾಶಿ ಗ್ರಾಮದ ಕೊರವಡಿ ಶಾಲೆಯ ಅಂಗನವಾಡಿ ಶಿಕ್ಷಕಿ ಕರ್ನಾಟಕ ರಾಜ್ಯ ಪ್ರಶಸ್ತಿ ವಿಜೇತ ಶೋಭಾ ಮೊಗವೀರ ಅವರನ್ನು ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲೆ ಕೋಟೇಶ್ವರ ಘಟಕದ ವತಿಯಿಂದ ಅವರ ಸ್ವಗೃಹದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಕೋಟೇಶ್ವರ ಘಟಕದ ಅಧ್ಯಕ್ಷರಾದ ರಾಘವೇಂದ್ರ ಹರಪನಕೆರೆ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅಭ್ಯಾಗತರಾಗಿ ಸಂಘದ ಮಾಜಿ ಅಧ್ಯಕ್ಷ ಸತೀಶ್ ಎಂ.ನಾಯ್ಕ ಶಿಕ್ಷಕರ ದಿನಾಚರಣೆ ಮಹಾತ್ವದ ಬಗ್ಗೆ ತಿಳಿಸಿದರು. ಕೋಟೇಶ್ವರ ಘಟಕದ ಗೌರವ ಅಧ್ಯಕ್ಷ ಆನಂದ್ ಕುಂದರ್ ಅಜ್ಜರಬೆಟ್ಟು, ಮಾಜಿ ಗೌರವಾಧ್ಯಕ್ಷ ಜಗದೀಶ್ ಮೊಗವೀರ ಮಾರ್ಕೊಡು, ಸುರೇಶ್ ಮೊಗವೀರ ಶಾನಾಡಿ, ಮಾಜಿ ಅಧ್ಯಕ್ಷ ಸುನಿಲ್ ಜಿ.ನಾಯ್ಕ ನಾಗರಾಜ್ ಬೀಜಾಡಿ ಹಾಗೂ ಗುರಿಕಾರರಾದ ರಾಮ ನಾಯ್ಕ ಬೀಜಾಡಿ, ಶೇಖರ್ ಇಂಬಾಳಿ, ರಾಜು ಗುರಿಕಾರ ಹಳಅಳಿವೆ, ಗೋಪಾಲ ಮೆಂಡನ್ ಪಡಾಯಿನ್ ಮನೆ, ಮತ್ತು ಕೊಮೆ ಕೊರವಾಡಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ರಾಘವೇಂದ್ರ ಕೊರವಡಿ, ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಘಟಕದ ಕಾರ್ಯದರ್ಶಿ ನಾಗರಾಜ್ ತೆಕ್ಕಟ್ಟೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.