ಬನ್ನೂರಲ್ಲಿ ಬಿಜೆಪಿ ಕಾರ್ಯಕರ್ತರಿಂದ ಸಂಭ್ರಮಾಚರಣೆ

11 bannur
ಬನ್ನೂರಿನಲ್ಲಿ ಬಿಜೆಪಿ ಕಾರ್ಯಕರ್ತರು ಪಿ.ಪ್ರಭಾಕರ್ ನೇತೃತ್ವದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಎನ್.ಎಂ.ರಾಮಚಂದ್ರ, ಟೌನ್ ಕಾಳೇಗೌಡ, ಬೇಕರಿ ಸುರೇಶ್, ಗಣೇಶ್, ರವಿ, ಗೋಪಿನಾಥ್, ದೇವರಾಜು, ಮಾಕನಳ್ಳಿ ದೇವರಾಜು, ದಾಸಪ್ಪ, ಮಾಯೀಗೌಡ, ಸತೀಶ್ ಇದ್ದರು.
Published on

ಬನ್ನೂರು: ನರೇಂದ್ರ ಮೋದಿ ಅವರು 3ನೇ ಬಾರಿಗೆ ಪ್ರಧಾನಿ ಹುದ್ದೆ ಅಲಂಕರಿಸುವ ಮೂಲಕ ದೇಶದ ಇತಿಹಾಸದಲ್ಲಿ ಹೊಸ ಯುಗ ಆರಂಭಿಸಿದ್ದಾರೆ ಎಂದು ಬಿಜೆಪಿ ಟೌನ್ ಅಧ್ಯಕ್ಷ ಪಿ.ಪ್ರಭಾಕರ್ ತಿಳಿಸಿದರು.

ಪಟ್ಟಣದ ಕಾವೇರಿ ವೃತ್ತದಲ್ಲಿ ಪಟಾಕಿ ಸಿಡಿಸಿದ ಬಳಿಕ ಸಾರ್ವಜನಿಕರಿಗೆ ಸಿಹಿ ವಿತರಣೆ ಮಾಡಿ ಮಾತನಾಡಿ, ಪ್ರಪಂಚದಲ್ಲಿ ಭಾರತಕ್ಕೆ ತನ್ನದೇ ಆದ ಮಹತ್ತರವಾದ ಸ್ಥಾನವಿದೆ ಎಂದರೆ ಅದಕ್ಕೆ ಮೋದಿ ಅವರ ಉತ್ತಮ ಆಡಳಿತ ಕಾರಣ ಎಂದರು.

10 ವರ್ಷದಲ್ಲಿ ದೇಶದಲ್ಲಿ ಆಗಿರುವ ಮಹತ್ತರ ಬದಲಾವಣೆಯನ್ನು ಪ್ರತಿಯೊಬ್ಬ ಮತದಾರರು ಅರಿತಿದ್ದು, ಉತ್ತಮ ಆಡಳಿತಕ್ಕೆ ಉತ್ತಮ ಫಲಿತಾಂಶ ನೀಡಿದ್ದಾರೆ. ಮುಂದಿನ ದಿನದಲ್ಲಿ ಸಾಕಷ್ಟು ಬದಲಾವಣೆಯಾಗಲಿದ್ದು, ನಮ್ಮ ದೇಶ ವಿಶ್ವ ಗುರು ಆಗುವ ಸಮಯ ದೂರವಿಲ್ಲ ಎಂದರು.

ಜಿಲ್ಲಾ ಕಾರ್ಯದರ್ಶಿ ಎನ್.ಎಂ.ರಾಮಚಂದ್ರ, ಟೌನ್ ಮಾಜಿ ಅಧ್ಯಕ್ಷ ಕಾಳೇಗೌಡ, ಮುಖಂಡರಾದ ಬೇಕರಿ ಸುರೇಶ್, ಗಣೇಶ್, ರವಿ, ಗೋಪಿನಾಥ್, ದೇವರಾಜು, ಮಾಕನಳ್ಳಿ ದೇವರಾಜು, ದಾಸಪ್ಪ, ಮಾಯೀಗೌಡ, ಸತೀಶ್ ಹಲವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net