

ಚಿತ್ರದುರ್ಗ: ಎಸ್‌ಆರ್‌ಎಸ್ ಹೆರಿಟೇಜ್ ಶಾಲೆಯ ಬ್ಲ್ಯೂಜೆಮ್ಸ್‌ನ ಚಿಣ್ಣರ ವಿಭಾಗದಿಂದ ಶಾಲೆಯ ಅನಂತಕೃಷ್ಣ ಸಭಾಂಗಣದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಚಿಣ್ಣರು ಕೃಷ್ಣ-ರಾಧೆ, ರುಕ್ಮಿಣಿ, ಬಲರಾಮ, ಕಂಸ, ಶೇಷನಾಗ, ದೇವಕಿ, ಯಶೋದೆಯ ವೇಷ ಧರಿಸಿ ಗಮನ ಸೆಳೆದರು.
ಕೃಷ್ಣನ ಮೂರ್ತಿಗೆ ಬೆಣ್ಣೆ ಸಮರ್ಪಿಸಿ, ಆರತಿ ಬೆಳಗಿ, ಪೂಜೆ ನೆರವೇರಿಸಲಾಯಿತು. ಪಾಲಕರು ತಮ್ಮ ಮಕ್ಕಳ ಜತೆ ರ‌್ಯಾಂಪ್ ವಾಕ್ ಕೂಡ ಮಾಡಿದರು.
ಚಿಣ್ಣರು ನವೋಲ್ಲಾಸದಿಂದ ಗೋವರ್ಧನಗಿರಿ, ಬರ್ತ್ ಆಫ್ ಕೃಷ್ಣ, ಬೆಣ್ಣೆ ಕದ್ದ ಕೃಷ್ಣ, ಮೊಸರು ಮಡಿಕೆ ಒಡೆಯುವುದು, ರಾಧೆ ಮತ್ತು ಕೃಷ್ಣನ ಟಗ್ ಆಫ್ ವಾರ್, ಕಂಸ ಮರ್ದನ, ತಾಯಿಂದ ದೂರವಾದ ಕೃಷ್ಣ ಹೀಗೆ ಹಲವು ಕ್ರಿಯಾತ್ಮಕ ರೂಪಕಗಳನ್ನು ಪ್ರಸ್ತುತಪಡಿಸಿ ಮೆರುಗು ನೀಡಿದರು.
ಎಸ್‌ಆರ್‌ಎಸ್ ಶಿಕ್ಷಣ ಸಮೂಹ ಸಂಸ್ಥೆಯ ಕಾರ್ಯದರ್ಶಿ ಸುಜಾತಾ ಲಿಂಗಾರೆಡ್ಡಿ, ಮಾರ್ಗದರ್ಶಕಿ ಲಿಖಿತಾ ಅಮೋಘ್, ಆಡಳಿತ ಮಂಡಳಿಯ ಡಾ.ಆಶ್ರಿತಾ ಕಿರಣ್, ಶಾಲೆಯ ಪ್ರಾಂಶುಪಾಲ ಎಂ.ಎಸ್.ಪ್ರಭಾಕರ್, ಶೈಕಣಿಕ ಸಂಯೋಜಕಿ ಶಾಂತಕುಮಾರಿ, ಗೀತಾ ಪಾಟೀಲ್, ಕವಿತಾ, ಶಿಲ್ಪಾ, ಸುಷ್ಮಾ, ಮಂಗಳಾ, ತೇಜು, ಶೃತಿ, ಸುಮಯಾ, ಸಿರಿಷಾ, ಲತಾ, ಸಪ್ನಾ, ರೇಖಾ ಇತರರಿದ್ದರು.