ಚಂದ್ರಯಾನ ಯಶಸ್ಸಿಗೆ ಸಂಭ್ರಮಾಚರಣೆ

ANNIGERI
Published on

ಅಣ್ಣಿಗೇರಿ: ಚಂದ್ರಯಾನ-3 ಯಶಸ್ವಿಯಾಗಿದ್ದಕ್ಕೆ ಪಟ್ಟಣದ ವೀರರಾಣಿ ಕಿತ್ತೂರು ಚನ್ನಮ್ಮನ ವೃತ್ತದಲ್ಲಿ ಬುಧವಾರ ಸಿಹಿ ಹಂಚಿ ಸಂಭ್ರಮಿಸಲಾಯಿತು.

ಷಣ್ಮುಖ ಗುರಿಕಾರ ಮಾತನಾಡಿ, ಚಂದ್ರಯಾನ- 3ರಿಂದ ಚಂದ್ರನಲ್ಲಿ ಇದೆ ಎನ್ನಲಾದ ನೀರಿನ ಕಣಗಳ ಅಧ್ಯಯನ ಸಾಧ್ಯವಾಗಲಿದೆ. ರಷ್ಯಾದ ಲೂನಾ ಚಂದ್ರನ ಮೇಲೆ ಇಳಿಯಲು ವಿಫಲವಾಗಿದೆ. ಇದನ್ನು ಹೊರತುಪಡಿಸಿ ಜಪಾನ್, ಇಸ್ರೇಲ್ ದೇಶಗಳಿಂದಲೂ ಚಂದ್ರನ ತಲುಪುವ ಪ್ರಯತ್ನ ನಡೆದಿವೆ. ಆದರೆ, ಯಾವುದು ಯಶಸ್ವಿಯಾಗಿಲ್ಲ. ಲ್ಯಾಂಡಿಂಗ್ ಹಂತದಲ್ಲೇ ಚಂದ್ರಯಾನ 2 ಯೋಜನೆ ವಿಫಲವಾಯಿತು. ಈ ಬಾರಿ ಅಸಂಖ್ಯಾತ ಭಾರತೀಯರು ಪ್ರಾರ್ಥನೆ ಯಶಸ್ವಿಯಾಗಿದೆ ಎಂದರು.

ನಾಗರಾಜ ದಳವಾಯಿ, ಈಶಪ್ಪ ಹೊಂಬಾಳ, ಫಕೀರಪ್ಪ ದನಕಾವು, ಅಶೋಕ ಕುರಿ, ಪ್ರವೀಣ ಹಾಳದೋಟರ, ಆನಂದ ಪೂಜಾರ, ವೀರೇಶ ಸುರಕೋಡ, ಮಂಜುನಾಥ ಹಿರೇವಳಿ, ಈರಪ್ಪ ವಡ್ಡಟ್ಟಿ, ಅಮೃತ ಮರಡ್ಡಿ, ಪುರದಪ್ಪ ರಾಮನಕೊಪ್ಪ, ಈರಣ್ಣ ಗೋರ್ಕಾರ, ಶಂಕ್ರಣ್ಣ ಇಂಗಳಹಳ್ಳಿ, ಮಾರುತಿ ಕಾಳಿ, ದೇವರಾಜ ಸವದತ್ತಿ, ಸಕ್ರಪ್ಪ ಪಲ್ಲೇದ, ಹೇಮಂತ ಕುರಹಟ್ಟಿ, ಶರಣಪ್ಪ ಶಿಶವಿನಹಳ್ಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net