ವೃದ್ದರಿಗೆ ಟೋಪಿ ವಿತರಿಸಿ ಸ್ವಾಮೀಜಿ ಜನ್ಮದಿನಾಚರಣೆ

22 ckm 3
ಚಿಕ್ಕಮಗಳೂರು ಹೊರವಲಯದ ಇಂದಾವರ ಸಮೀಪ ವೃದ್ದಾಶ್ರಮದ ಹಿರಿಯರಿಗೆ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರ ಜನ್ಮ ದಿನದ ಅಂಗವಾಗಿ ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ಮಹಿಳಾ ಘಟಕದಿಂದ ಟೋಪಿ ಮತ್ತು ಸ್ಕಾöçಪ್ ವಿತರಣೆ ಮಾಡಲಾಯಿತು. ಕೃಷ್ಣವೇಣಿ ರಮೇಶ್, ಚೈತ್ರಾ ಎಸ್.ಗೌಡ, ಪ್ರತಿಮಾ, ಸವಿತಾ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರ ೫೫ನೇ ಜನ್ಮದಿನ ಅಂಗವಾಗಿ ಇಂದಾವರ ಸಮೀಪ ವೃದ್ದಾಶ್ರಮದ ಹಿರಿಯರಿಗೆ ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ಮಹಿಳಾ ಘಟಕದಿಂದ ಟೋಪಿ ಮತ್ತು ಸ್ಕಾöçಪ್ ವಿತರಣೆ ಮಾಡಿ ಶ್ರೀಗಳ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಈ ವೇಳೆ ಮಾತನಾಡಿದ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೃಷ್ಣವೇಣಿ ರಮೇಶ್, ಶ್ರೀಗಳು ೭೨ನೇ ಪೀಠಾಧ್ಯಕ್ಷರಾಗಿ ಗದ್ದುಗೆಗೇರಿದ ಕಾಲಘಟ್ಟದಲ್ಲಿ ೪೦೦ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಲಕ್ಷಾಂತರ ವಿದ್ಯಾರ್ಥಿಗಳ ಬದುಕು ಕಟ್ಟಿದ್ದಾರೆ ಎಂದು ಹೇಳಿದರು.
ಸ್ವಾಮೀಜಿ ಉನ್ನತ ವಿದ್ಯಾಭ್ಯಾಸ ಮಾಡಿ ಬಳಿಕ ಆಧ್ಯಾತ್ಮಕ ಕಡೆ ಒಲವು ಹೊಂದಿ ಸನ್ಯಾಸಿಯಾದರು. ಈ ನಡುವೆ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ ಜೊತೆಗೂಡಿ ಎರಡೂವರೆ ದಶಕಗಳ ಆದಿಚುಂಚನಗಿರಿ ಮಠದಲ್ಲಿ ಸೇವೆ ಸಲ್ಲಿಸಿ, ಚಿಕ್ಕಾಬಳ್ಳಾಪುರ ಶಾಖಾ ಮಠದ ಮುಖ್ಯಸ್ಥರಾಗಿ ಬಳಿಕ ಮಹಾ ಸಂಸ್ಥಾನ ಪೀಠಾಧ್ಯಕ್ಷರಾದವರು ಎಂದು ತಿಳಿಸಿದರು.
ಶ್ರೀಮಠಕ್ಕೆ ವಿಶ್ವಾದಾದ್ಯಂತ ಹಲವು ಭಕ್ತಗಣ, ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿದ್ದಾರೆ. ಶ್ರೀಬಾಲಗಂಗಧಾರನಾಥ ಸ್ವಾಮೀಜಿ ಹಾಗೂ ಶ್ರೀನಿರ್ಮಲನಂದನಾಥ ಸ್ವಾಮೀಜಿ ಸೇವೆ ಪ್ರಪಂಚದಾದ್ಯAತ ಪಸರಿಸಿದೆ. ಅಲ್ಲದೇ ದೇಶ-ವಿದೇಶದ ಮೂಲೆ ಮೂಲೆಗಳಲ್ಲಿ ಮಠ-ಮಂದಿರ ನಿರ್ಮಾಣಗೊಂಡಲ್ಲಿ ಆದಿ ಚುಂಚನಗಿರಿ ಸ್ವಾಮೀಜಿಗಳಿಗೆ ಆಹ್ವಾನವಿರುತ್ತದೆ ಎಂದರು.
ಮಠದಲ್ಲಿ ಬಡ ಹಾಗೂ ಮಧ್ಯಮ ವರ್ಗದ ಮಕ್ಕಳಿಗೆ ಉಚಿತ ಶಿಕ್ಷಣ ವ್ಯವಸ್ಥೆ ಕಲ್ಪಿಸಿದೆ. ಅಲ್ಲದೇ ಪ್ರತಿನಿತ್ಯವು ವಿದ್ಯಾರ್ಥಿಗಳು ಹಾಗೂ ಆಗಮಿಸುವ ಭಕ್ತಾಧಿಗಳಿಗೆ ಅನ್ನದಾಸೋಹ ಏರ್ಪಡಿಸುವ ಮೂಲಕ ತ್ರಿವಿಧ ದಾಸೋಹಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷೆ ಚೈತ್ರಾ ಎಸ್.ಗೌಡ ಹಿರಿಯ ಜೀವಗಳಿಗೆ ಚಳಿಗಾಲದಲ್ಲಿ ಉಪಯೋಗುವ ನಿಟ್ಟಿನಲ್ಲಿ ಟೋಪಿ, ಸ್ಕಾöçಪ್ ವಿತರಿಸಿ ಶ್ರೀಗಳ ಜನ್ಮದಿನ ಆಚರಿಸಿz್ದೆÃವೆ. ಮುಂಬರುವ ದಿನಗಳಲ್ಲಿ ಸಂಘದಿAದ ಹಲವಾರು ಸಾಮಾಜಿಕ ಕಾರ್ಯಗಳನ್ನು ಹಮ್ಮಿಕೊಳ್ಳಲು ಉz್ದÉÃಶಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಕಾರ್ಯದರ್ಶಿ ಪ್ರತಿಮಾ, ಖಜಾಂಚಿ ಸವಿತಾ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net