ವಿನೂತನವಾಗಿ ನೂತನ ವರ್ಷ ಆಚರಣೆ

new year
ಕೂಡಲಸಂಗಮದ ಬಸವಣ್ಣನ ಐಕ್ಯಸ್ಥಳದಲ್ಲಿ ಧ್ಯಾನಕ್ಕೆ ಕುಳಿತ ಬಸವಜಯಮೃತ್ಯುಂಜಯ ಸ್ವಾಮೀಜಿ.
Published on

ಕೂಡಲಸಂಗಮ: ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ವಚನ ಗಾಯನದೊಂದಿಗೆ ನೂತನ ವರ್ಷವನ್ನು ಬಸವಣ್ಣವರ ಐಕ್ಯ ಮಂಟಪದಲ್ಲಿ ಸ್ವಾಗತಿಸಾಲಯಿತು.

ಭಾನುವಾರ ರಾತ್ರಿ 11.50ಕ್ಕೆ ವಿಶೇಷ ಲಿಂಗ ಪೂಜೆ ಮಾಡಿ ‘ಓಂ ಶ್ರೀ ಗುರು ಬಸವ ಲಿಂಗಾಯನಮಃ’ ಎಂಬ ಮಂತ್ರ ಪಠಣ ಮಾಡಿದರು. ಕಳೆದ ವರ್ಷದ ಒಳ್ಳೆಯ ಕಾರ್ಯಗಳನ್ನು ಸ್ಮರಿಸುತ್ತ, ಕೆಟ್ಟ ಕಾರ್ಯಗಳನ್ನು ಮರೆಯುವಂತೆ ಧ್ಯಾನ ಮಾಡಲಾಯಿತು. 12 ಗಂಟೆಗೆ ಬಸವಣ್ಣವರ ಐಕ್ಯ ಸ್ಥಳದಲ್ಲಿ ಕುಳಿತು ವಚನ ಪಠಣ ಮಾಡಿದರು.

‘ಮೀಸಲಾತಿ ಹೋರಾಟಕ್ಕೆ ನ್ಯಾಯ ದೊರೆಯಲಿ, ನಾಡಿನಾದ್ಯಂತ ಉತ್ತಮ ಮಳೆ ಬೆಳೆ ದೊರೆಯಲಿ. ವಿಶ್ವದಾದ್ಯಂತ ಶಾಂತಿ ನೆಲೆಸಲಿ, ಅನ್ನ ಕೊಡುವ ರೈತ, ದೇಶ ಕಾಯುವ ಸೈನಿಕನಿಗೆ ಒಳಿತಾಗಲಿ’ ಎಂದು ಹೇಳಿದರು.
ಮುಖಂಡರಾದ ಬಸವರಾಜ ರಕ್ಕಸಗಿ, ಬಿ.ಕೆ. ಗೌಡರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net