

ಭದ್ರಾವತಿ: ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವನ್ನು ಭಾನುವಾರ ತಾಲೂಕು ಬಿಜೆಪಿ ಕಾರ್ಯಾಲಯದಲ್ಲಿ ರಕ್ತದಾನ ಶಿಬಿರದ ಮೂಲಕ ಆಚರಿಸಲಾಯಿತು. ನೂರಾರು ಕಾರ್ಯಕರ್ತರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರು.
ಬಿಜೆಪಿ ಮಂಡಲ ಅಧ್ಯಕ್ಷ ಜಿ.ಧರ್ಮಪ್ರಸಾದ್ ಮಾತನಾಡಿ, ಮೋದಿ ಅವರು ದೇಶದ ಒಳಿತಿಗೋಸ್ಕರ ಸಾಕಷ್ಟು ಕಾರ್ಯಕ್ರಮಗಳನ್ನು ರೂಪಿಸಿ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಅನುಕೂಲ ಮಾಡಿಕೊಡುತ್ತಿದ್ದಾರೆ ಎಂದರು.
ರಕ್ತದಾನವೂ ಒಂದು ಸೇವಾ ಕಾರ್ಯವಾಗಿದ್ದು, ರಕ್ತದಿಂದ ನೂರಾರು ಜೀವ ಉಳಿಸಬಹುದಾಗಿದೆ. ಎಲ್ಲರೂ ರಕ್ತದಾನ ಮಾಡಿ ಮತ್ತೊಂದು ಜೀವವನ್ನು ಉಳಿಸುವ ಪ್ರಯತ್ನಕ್ಕೆ ಕೈ ಜೋಡಿಸಿ ಎಂದರು.
ಪ್ರಮುಖರಾದ ಚನ್ನೇಶ್, ಗೋಕುಲ್ ಕೃಷ್ಣ, ಧನುಷ್, ಹೇಮಂತ್, ಪ್ರದೀಪ್, ಕೆ.ಎನ್.ಶ್ರೀಹರ್ಷ, ಸುನೀತಾ, ಸರಸ್ವತಿ, ರಾಜಶೇಖರ್, ಕವಿತಾ ಇತರರಿದ್ದರು.