

ವಿರಾಜಪೇಟೆ : ವಿರಾಜಪೇಟೆ ನಗರದ ಐತಿಹಾಸಿಕ ಗೌರಿ-ಗಣೇಶ ಹಬ್ಬ ವೈಭವದೊಂದಿಗೆ ನಡೆಯಲಿದೆ ಎಂದು ವಿರಾಜಪೇಟೆ ನಗರ ಐತಿಹಾಸಿಕ ಜನೋತ್ಸವ ಸಮಿತಿ ಕಾರ್ಯಾಧ್ಯಕ್ಷ ಶಬರೀಶ್ ಶೆಟ್ಟಿ ತಿಳಿಸಿದರು.
ನಗರದ ಪುರಭವನದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ವಿರಾಜಪೇಟೆ ನಗರ ಐತಿಹಾಸಿಕ ಜನೋತ್ಸವ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು,ಈಗಾಗಲೇ ಶಾಸಕರು ಹಬ್ಬಕ್ಕೆ ಆಗಬೇಕಾದ ವ್ಯವಸ್ಥೆಗಳಿಗೆ ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಜನೋತ್ಸವ ಸಮಿತಿ ವತಿಯಿಂದಲೂ ಹಬ್ಬದ ರಂಗು ಹೆಚ್ಚಿಸಲು ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತದೆ ಎಂದರು.
ವೃತ್ತ ನಿರೀಕ್ಷಕ ಶಿವರುದ್ರ ಮಾತನಾಡಿ, ಗಣೇಶೋತ್ಸವದ ಸಂದರ್ಭದಲ್ಲಿ ಡಿಜೆ ಬಳಕೆ ಮಾಡದಂತೆ ಸುಪ್ರೀಂಕೋರ್ಟ್ ಆದೇಶ ನೀಡಿದ್ದು ಎಲ್ಲರೂ ಇದನ್ನೂ ಪಾಲಿಸಬೇಕು. ರಾತ್ರಿ 10 ಗಂಟೆ ಬಳಿಕ ಧ್ವನಿವರ್ಧಕ ಬಳಕೆ ಮಾಡಬಾರದು ಎಂದು ಸೂಚನೆ ನೀಡಿದರು.
ಪುರಸಭೆ ಸದಸ್ಯರಾದ ದೇಚಮ್ಮಕಾಳಪ್ಪ, ರಂಜಿ ಪೂಣಚ್ಚ, ರಜನಿಕಾಂತ್, ಸುನೀತಾ ಜೂನಾ, ಫಸಿಹಾ ತಬಸುಮ್, ಪೃಥ್ವಿನಾಥ್, ಎಸ್.ಎಚ್.ಮತೀನ್, ಸುಭಾಷ್, ಮಹದೇವ್, ಮುಖ್ಯಾಧಿಕಾರಿ ಚಂದ್ರಕುಮಾರ್, ಮಾಜಿ ಸದಸ್ಯ ರಚನ್, ಉತ್ಸವ ಸಮಿತಿಯ ಆನಂದ್ ನಂಜಪ್ಪ, ಶ್ರೀಕಾಂತ್ ಶೆಟ್ಟಿ ಇತರರು ಇದ್ದರು.