

ವಿಜಯಪುರ: ಇಲ್ಲಿನ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಶನಿವಾರ ದೇವರ ದಾಸಿಮಯ್ಯ ಅವರ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.
ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಮಾತನಾಡಿ, ದೇವರ ದಾಸಿಮಯ್ಯ ಅವರು ಖ್ಯಾತ ವಚನಕಾರರು. ಅವರ ಆದರ್ಶಗಳನ್ನು ಅಳವಡಿಸಿಕೊಳ್ಳೋಣ ಎಂದರು.
ತಹಸೀಲ್ದಾರ್ ಕವಿತಾ ಅವರು ದೇವರ ದಾಸಿಮಯ್ಯ ಭಾವಚಿತ್ರಕ್ಕೆ ಪೂಜೆ ಹಾಗೂ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು.
ವಿವಿಧ ಸಮಾಜದ ಮುಖಂಡರಾದ ಬಿ.ಎಂ. ನೂಲವಿ, ಎ.ಬಿ. ಕೋಷ್ಠಿ, ಎ.ಬಿ. ಅಂಕದ, ಆನಂದ ಹುಲಮನಿ, ಜವಳಗಿ ಎಂ.ಸಿ, ನಾಗಪ್ಪ ಭಾವಿಕಟ್ಟಿ, ಸಂತೋಷ ಬಂಡೆ, ಪಿ.ಎಂ. ಬಲ್ಲಾಳ, ವಿದ್ಯಾವತಿ ಅಂಕಲಗಿ, ಬಸವರಾಜ ಒಂಟಗೋಡಿ ಮತ್ತಿತರರಿದ್ದರು.