

ಹುಬ್ಬಳ್ಳಿ: ತ್ಯಾಗ ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ನಗರದ ವಿವಿಧೆಡೆ ಬಕ್ರೀದ್ ಹಬ್ಬವನ್ನು ಶನಿವಾರ ಶ್ರದ್ಧಾ-ಭಕ್ತಿಯಿಂದ ಆಚರಿಸಲಾಯಿತು.
ಇಲ್ಲಿಯ ಚನ್ನಮ್ಮ ಮೈದಾನದಲ್ಲಿ (ಈದ್ಗಾ) ಬೆಳಗ್ಗೆ ಆಗಮಿಸಿದ ಮುಸ್ಲಿಮರು, ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಮೌಲಾನಾ ಜಹಿರುದ್ದೀನ ಖಾಜಿ ನೇತೃತ್ವದಲ್ಲಿ ಪ್ರಾರ್ಥನೆ ಸಲ್ಲಿಸಿ, ವಿಶ್ವದೆಲ್ಲಡೆ ಸುಖ-ಶಾಂತಿ ನೆಲೆಸಲಿ, ಎಲ್ಲರೂ ಸಹೋದರತೆ ಮತ್ತು ಸಾಮರಸ್ಯದಿಂದ ಸಹಬಾಳ್ವೆ ನಡೆಸುವಂತೆ ಕೋರಲಾಯಿತು.
ಅಂಜುಮನ್ ಅಧ್ಯಕ್ಷ ಹಾಗೂ ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ಕಾಂಗ್ರೆಸ್ ಮಹಾನಗರ ಜಿಲ್ಲಾಧ್ಯಕ್ಷ ಅಲ್ತಾಫ್‌ಹುಸೇನ್ ಹಳ್ಳೂರ, ವಾಕರಸಾ ಸಂಸ್ಥೆ ಮಾಜಿ ಅಧ್ಯಕ್ಷ ಸದಾನಂದ ಡಂಗನವರ, ಪ್ರಮುಖರಾದ ದಾದಾ ಹಯಾತ್ ಖೈರಾತಿ, ಶಿರಾಜ್ ಅಹ್ಮದ್ ಕುಡಚಿವಾಲೆ, ಅನ್ವರ ಮುಧೋಳ, ಬಾಬಾಜಾನ್ ಮುಧೋಳ, ಮಹ್ಮದ್ ಯುಸೂಫ್ ಸವಣೂರ, ಆರೀಫ್ ಭದ್ರಾಪುರ ಇತರರು ಭಾಗವಹಿಸಿದ್ದರು.
ಉಣಕಲ್: ಉಣಕಲ್ ಟಿಂಬರ್ ಯಾರ್ಡ್ ಬಳಿಯ ಈದ್ಗಾ ಮೈದಾನದಲ್ಲಿ ಶ್ರದ್ಧಾ-ಭಕ್ತಿಯಿಂದ ಬಕ್ರೀದ್ ಹಬ್ಬವನ್ನು ಮುಸ್ಲಿಮರು ಆಚರಿಸಿದರು.
ಮಾಜಿ ಸಂಸದ ಪ್ರೊ.ಐ.ಜಿ. ಸನದಿ, ಹುಡಾ ಅಧ್ಯಕ್ಷ ಶಾಕೀರ್ ಸನದಿ, ಪಾಲಿಕೆ ಮಾಜಿ ಸದಸ್ಯ ಹಜರತ್ ಅಲಿ ದೊಡ್ಡಮನಿ, ಶರೀಫ ಗರಗದ, ರಫೀಕ್ ಅಹ್ಮದ್ ದೊಡ್ಡಮನಿ, ದಾವಲಸಾಬ್ ನದಾಫ್, ಹುಸೇನ್‌ಬಾಷಾ ಹಜರತ್‌ನವರ, ರಿಯಾಜ್ ದೊಡ್ಡಮನಿ, ಹಜರತ್‌ಅಲಿ ಅಮರಗೋಳ, ಖಾದರಬಾಷಾ ಶಿಬಾರಗಟ್ಟಿ, ಇಕ್ಬಾಲ್ ಹರ್ಲಾಪುರ, ಹಜರತ್ ಅಲಿ ನದಾಫ್, ಇತರರು ಇದ್ದರು.