ನಬಾರ್ಡ್‌ಗೆ 42ನೇ ವರ್ಷದ ಸಂಭ್ರಮ: ರೈತ ಉತ್ಪಾದಕ ಸಂಸ್ಥೆಗಳಿಗೆ ನೆನಪಿನ ಕಾಣಿಕೆ ವಿತರಣೆ

nabard2
Published on

ಮಂಡ್ಯ: ಸ್ವಾತಂತ್ರ್ಯ ಅಮೃತಮಹೋತ್ಸವ ಪ್ರಯುಕ್ತ ನಗರದ ಆರ್‌ಸಿಟಿಯಲ್ಲಿ ಸೋಮವಾರ ನಬಾರ್ಡ್‌ನ 42ನೇ ವರ್ಷದ ಸಂಸ್ಥಾಪನ ದಿನವನ್ನು ಆಚರಿಸಲಾಯಿತು.

ನಬಾರ್ಡ್ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕಿ ಹರ್ಷಿತಾ, ನಬಾರ್ಡ್ 42ನೇ ವರ್ಷದ ಮೈಲಿಗಲ್ಲನ್ನು ಮುಟ್ಟಿದೆ. ಅಂತೆಯೇ ಗ್ರಾಮೀಣ ಭಾಗದ ರೈತರು ಮತ್ತು ರೈತ ಉತ್ಪಾದಕ ಸಂಸ್ಥೆಗಳಿಗೆ ಹಲವು ಸೌಲಭ್ಯಗಳನ್ನು ನೀಡಲಾಗುತ್ತಿದೆ. ಅದನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಲೀಡ್ ಬ್ಯಾಂಕ್ ವ್ಯವಸ್ಥಾಪಕ ಅರುಣ್‌ಕುಮಾರ್ ಮಾತನಾಡಿ, ರೈತರು ಮತ್ತು ರೈತ ಉತ್ಪಾದಕ ಸಂಸ್ಥೆಗಳು ನಬಾರ್ಡ್ ಯೋಜನೆಯ ಮೂಲಕ ಬ್ಯಾಂಕ್‌ನಿಂದ ಹಣಕಾಸಿನ ನೆರವನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿದರು.

ಆರ್‌ಸಿಟಿ ನಿರ್ದೇಶಕ ವಿವೇಕ್ ಮಾತನಾಡಿ, ಯುವಕ-ಯುವತಿಯರಿಗೆ 50ಕ್ಕೂ ಹೆಚ್ಚು ಕೌಶಲಾಭಿವೃದ್ಧಿ ತರಬೇತಿ ಕಾರ್ಯಾಗಾರ ನಡೆಸಲಾಗುತ್ತಿದೆ. ಇದನ್ನು ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು.

ಇದೇ ವೇಳೆ ಸಂಸ್ಥಾಪನ ದಿನ ಅಂಗವಾಗಿ ರೈತ ಉತ್ಪಾದಕ ಸಂಸ್ಥೆಗಳಿಗೆ ನೆನಪಿನ ಕಾಣಿಕೆ ನೀಡಲಾಯಿತು. ರೈತ ಉತ್ಪಾದಕ ಸಂಸ್ಥೆಗಳ ಅಧ್ಯಕ್ಷರು, ಆಡಳಿತ ಮಂಡಳಿ ನಿರ್ದೇಶಕರು, ರೈತರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net