ಕಿತ್ತೂರು ರಾಣಿ ಚನ್ನಮ್ಮಳ ವಿಜಯೋತ್ಸವಕ್ಕೆ 200 ವರ್ಷಗಳ ಸಂಭ್ರಮಾಚರಣೆ

23 Dwd 3
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಶಿಕ್ಷಣ ಇಲ್ಲದಿದ್ದರೆ ಸಾಧನೆ ಅಸಾಧ್ಯ ಶಿಕ್ಷಣದಿಂದ ಮನುಷ್ಯ ಯಾವುದೇ ಸಮಸ್ಯೆಯನ್ನು ಎದುರಿಸಿ ಬಗೆಹರಿಸಿಕೊಳ್ಳಬಹುದು. ಇದನ್ನು ಕಿತ್ತೂರು ರಾಣಿ ಚನ್ನಮ್ಮ ಬದುಕಿನಿಂದ ಕಲಿಯಬಹುದು ಎಂದು ಜಿಲ್ಲಾಽಕಾರಿ ದಿವ್ಯ ಪ್ರಭು ಹೇಳಿದರು.

ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಶಾಂತಾದೇವಿ ಮಾಳವಾಡ ದತ್ತಿ ಕಾರ್ಯಕ್ರಮ ಹಾಗೂ ಕಿತ್ತೂರು ರಾಣಿ ಚನ್ನಮ್ಮಳ ವಿಜಯೋತ್ಸವಕ್ಕೆ 200 ವರ್ಷಗಳ ಸಂಭ್ರಮಾಚರಣೆ ಅಂಗವಾಗಿ ಬುಧವಾರ ಆಯೋಜಿಸಿದ್ದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಮಹಿಳೆ ಜೀವನದಲ್ಲಿ ಎದುರಾಗುವ ಕಷ್ಟಗಳನ್ನು ಎದುರಿಸಿದಾಗ ಸಾಧನೆ ಸಾಧ್ಯ. ರಾಣಿ ಚನ್ನಮ್ಮ ಸಮಸ್ಯೆಗಳನ್ನು ಎದುರಿಸದೆ ಮನೆಯಲ್ಲಿ ಉಳಿದಿದ್ದರೆ ಸ್ಮರಿಸಿಕೊಳ್ಳುತ್ತಿರಲಿಲ್ಲ. ಮನೆಯನ್ನು ತೂಗಿಸಿ, ಮಕ್ಕಳನ್ನು ಆರೈಕೆ ಮಾಡುತ್ತ ಇಷ್ಟದ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಾಳೆಂದರೆ ಅವಳಿಗೆ ಸಾಮಾನ್ಯರಿಗಿಂತ ಒಂದೂವರೆ ಪಟ್ಟು ಶಕ್ತಿ ಹೆಚ್ಚಿದೆ ಎಂಬುದು ಸಂಶೋಧನೆಯ ಫಲಿತಾಂಶ ಹೇಳುತ್ತದೆ. ವಿದ್ಯಾರ್ಥಿಗಳು ಕೀಳರಿಮೆಯಿಂದ ಹೊರಗೆ ಬರಬೇಕು. ಸೌಂದರ್ಯ ನಮ್ಮ ಸಾಧನೆ ಆಗಬೇಕು ವಿನಃ ಬಾಹ್ಯ ಸೌಂದರ್ಯವಲ್ಲ. ಸಾಧನೆ ಸೌಂದರ್ಯ ಶಾಶ್ವತ ಎಂದರು.

ಸAಘದ ಅಧ್ಯಕ್ಷ ಚಂದ್ರಕಾ0ತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಾಧ್ಯಕ್ಷ ಬಸವಪ್ರಭು ಹೊಸಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪದಾಽಕಾರಿಗಳಾದ ಪ್ರೊ. ಮಾಲತಿ ಪಟ್ಟಣಶೆಟ್ಟಿ, ಸತೀಶ ತುರಮರಿ, ಶಂಕರ ಕುಂಬಿ, ಡಾ. ಶ್ರೀಶೈಲ ಹುದ್ದಾರ ವೇದಿಕೆಯಲ್ಲಿದ್ದರು.

ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ನಿರೂಪಿಸಿದರು. ರಾಣಿ ಚನ್ನಮ್ಮ ಅಭಿಮಾನದ ಜಾಥಾ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ವಿದ್ಯಾರ್ಥಿಗಳು ಚನ್ನಮ್ಮ, ಸಂಗೊಳ್ಳಿ ರಾಯಣ್ಣ ಮುಂತಾದವರ ವೇಷಭೂಷಣದಲ್ಲಿ ಗಮನ ಸೆಳೆದರು.

ವೀರಣ್ಣ ಒಡ್ಡೀನ, ಗುರು ಹಿರೇಮಠ, ಡಾ. ಧನವಂತ ಹಾಜವಗೋಳ, ಶಿವಾನಂದ ಭಾವಿಕಟ್ಟಿ, ನಿಂಗಣ್ಣ ಕುಂಟಿ, ಎಸ್.ಜಿ. ಪಾಟೀಲ, ಶಂಕರಲಿAಗ ಶಿವಳ್ಳಿ, ಎಸ್.ಬಿ. ಅಯ್ಯನಗೌಡರ, ಚಂದ್ರಶೇಖರ ಅಮಿನಗಡ, ಪ್ರಭು ಹಂಚಿನಾಳ ಹಾಗೂ ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net