

ಕಂಪ್ಲಿ: ಮಿ ವಿವೇಕಾನಂದ ಜಯಂತ್ಯುತ್ಸವ ನಿಮಿತ್ತ, ಇಲ್ಲಿನ ಷಾ.ಮಿಯಾಚಂದ್ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಹಳೇ ವಿದ್ಯಾರ್ಥಿಗಳ ಅಭಿವೃದ್ಧಿ ಸಂಘ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ಮಂಗಳವಾರ ಹಮ್ಮಿಕೊಂಡಿದ್ದ ಪರೀಕ್ಷಾ ಭಯ ನಿವಾರಣೆ, ವ್ಯಕ್ತಿತ್ವ ವಿಕಸನ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ತಹಸೀಲ್ದಾರ್ ಎಸ್.ಶಿವರಾಜ ಚಾಲನೆ ನೀಡಿ, ವಿದ್ಯಾರ್ಥಿಗಳು ನಕಲುರಹಿತ ಪರೀಕ್ಷೆ ಬರೆಯಬೇಕು. ಪರೀಕ್ಷೆ ಪಾವಿತ್ರ್ಯತೆ ಕಾಪಾಡಿದಾಗ, ಜೀವನ ಜವಾಬ್ದಾರಿ ರೂಢಿಸಿಕೊಂಡಲ್ಲಿ ಪರೀಕ್ಷಾ ಭಯ ಇರುವುದಿಲ್ಲ. ಪರೀಕ್ಷೆಯನ್ನು ಹಬ್ಬದಂತೆ ಸಂಭ್ರಮಿಸಬೇಕು. ಏಕಾಗ್ರತೆಯಿಂದ ಅಭ್ಯಸಿಸಿದರೆ ಹೆಚ್ಚು ಅಂಕಗಳಿಕೆ ಕಷ್ಟವಲ್ಲ ಎಂದು ಹೇಳಿದರು.
ಹೊಸಪೇಟೆಯ ಸಾಫ್ಟ್ ಸ್ಕಿಲ್ ತರಬೇತುದಾರ ಗುರುರಾಜ ಮಾಲ್ವಿ ಕರಣಂ ಉಪನ್ಯಾಸ ನೀಡಿ, ಪರೀಕ್ಷೆಗೆ ಇನ್ನು 45ದಿನ ಬಾಕಿಯಿದ್ದು ಏಕಾಗ್ರತೆಯಿಂದ ಅಭ್ಯಾಸ ಮಾಡಿದಲ್ಲಿ ಉತ್ತಮ ಅಂಕಗಳಿಸಬಹುದು. ಇದಕ್ಕಾಗಿ ವಿಷಯಗಳನ್ನು ಓದಲು ಟೈಮ್‌ಟೇಬಲ್ ಅವಳಡಿಸಿಕೊಂಡು, ನಿತ್ಯ 7ತಾಸಿನಂತೆ ಬೆಳಗ್ಗೆ 5ಗಂಟೆತನಕ ನಿದ್ರಿಸಬೇಕಿದೆ. ಕಠಿಣ ವಿಷಯಗಳನ್ನು ಬೆಳಗ್ಗೆ 5ಗಂಟೆಯಿಂದ 7ಗಂಟೆತನಕ ಅಭ್ಯಾಸಿಸಬೇಕು. ಐದು ವರ್ಷಗಳ ಪ್ರಶ್ನೆ ಪತ್ರಿಕೆ ಬಿಡಿಸುವುದರಿಂದ, ನಿತ್ಯ ಬರವಣಿಗೆ ಅಭ್ಯಾಸದಿಂದ ಪರೀಕ್ಷೆಯಲ್ಲಿ ಸರಳವಾಗಿ ಬರೆಯಲು ಸಾಧ್ಯ ಎಂದು ಮಕ್ಕಳಿಗೆ ಪರೀಕ್ಷಾ ಭಯ ಮೂಡದಂತೆ, ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸುವ ಬಗ್ಗೆ ನಾನಾ ಸಲಹೆ ಸೂಚನೆ ನೀಡಿದರು.
ಸಂಘದ ಅಧ್ಯಕ್ಷ ಯು.ಎಂ.ವಿದ್ಯಾಶಂಕರ ಅಧ್ಯಕ್ಷತೆ ವಹಿಸಿದ್ದರು. ಬಿಇಒ ಟಿ.ಎಂ.ಸಿದ್ಧಲಿಂಗಮೂರ್ತಿ, ತಾಪಂ ಇಒ ಆರ್.ಕೆ.ಶ್ರೀಕುಮಾರ, ನರೇಗಾ ಎಡಿ ಕೆ.ಎಸ್.ಮಲ್ಲನಗೌಡ, ಉಪ ಪ್ರಾಚಾರ್ಯೆ ಸುಜಾತಾ, ಪ್ರಾಚಾರ್ಯ ಎಚ್.ಚಂದ್ರಶೇಖರ, ಪ್ರಮುಖರಾದ ಎನ್.ಎಂ.ಪತ್ರೆಯ್ಯಸ್ವಾಮಿ, ಬಸವರಾಜ ಪಾಟೀಲ್, ಟಿ.ಎಂ.ಬಸವರಾಜ, ಎಸ್.ಎಂ.ನಾಗರಾಜ, ಬೂದಗುಂಪಿ ಹುಸೇನ್ ಸಾಬ್, ಪಿ.ಬ್ರಹ್ಮಯ್ಯ, ಕೆ.ಎಂ.ಹೇಮಯ್ಯಸ್ವಾಮಿ ಇತರರಿದ್ದರು.