

ಬೆಂಗಳೂರು: ಜಗತ್ತಿನಾದ್ಯಂತ ಜೂ.21ರಂದು ಯೋಗ ದಿನ ಆಚರಿಸುತ್ತಿದ್ದು, ಈ ಬಾರಿ ಎಲ್ಲರೂ ಮನೆಯಲ್ಲೆ ಇದ್ದು ಆಚರಣೆ ಮಾಡಬೇಕು ಎಂದು ಆರೋಗ್ಯ ಮತ್ತು ವೈದ್ಯಕಿಯ ಶಿಣ ಸಚಿವ ಡಾ.ಕೆ.ಸುಧಾಕರ್ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಸೋಮವಾರ ಯೋಗ ದಿನವನ್ನು ಆನ್ಲೈನ್ನಲ್ಲೆ ಆಚರಿಸಲಾಗುತ್ತಿದೆ. "ಬಿ ವಿತ್ ಯೋಗ ಬಿ ಅಟ್ ಹೋಮ್' ಮತ್ತು "ಯೋಗ ಫಾರ್ ವೆಲ್ನೆಸ್' ೂಷವಾಕ್ಯದಡಿ ಆಚರಣೆ ಮಾಡಲಾಗುತ್ತ್ತಿದೆ. ಯಾರೂ ಗುಂಪುಗೂಡಿ ಆಚರಿಸಬಾರದು. ಮುಖ್ಯಮಂತ್ರಿಗಳು ಅಧಿಕೃತ ನಿವಾಸದಲ್ಲೆ ಯೋಗ ಮಾಡಲಿದ್ದು, ನಾನು ಕೂಡ ಪಾಲ್ಗೊಳ್ಳುತ್ತೇನೆ. ಎಲ್ಲರೂ ಮುಂಜಾನೆ 6 ಗಂಟೆಗೆ ಮನೆಯಲ್ಲೆ ಯೋಗ ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಿ ಎಂದು ಕೋರಿದರು. ಎಸ್&ವ್ಯಾಸ ಸಂಸ್ಥೆ ಗೌರವಾಧ್ಯ ನಾಗೇಂದ್ರ, ಸದ್ಗುರು, ಶ್ರೀ ರವಿಶಂಕರ್ ಗುರೂಜಿ, ಶ್ರೀ ವಚನಾನಂದ ಸ್ವಾಮೀಜಿ ಯೋಗಾಭ್ಯಾಸದ ವಿಡಿಯೋ ಹಂಚಿಕೊಳ್ಳಲಾಗುವುದು. ಆಯುಷ್ನ ಎಲ್ಲ ಸಂಸ್ಥೆಗಳ ವಿದ್ಯಾರ್ಥಿಗಳು ಯೋಗ ಮಾಡಲು ಕೋರಲಾಗಿದೆ ಎಂದು ತಿಳಿಸಿದರು.
ಲಸಿಕಾ ಮೇಳಕ್ಕೆ ಗುರಿ
ಜೂ.21ರಂದು ಕೋವಿಡ್ ಲಸಿಕೆ ಮೇಳಕ್ಕೆ ಚಾಲನೆ ದೊರೆಯಲಿದೆ. 18&44 ವರ್ಷದವರಿಗೆ, 45 ವರ್ಷ ಮೇಲ್ಪಟ್ಟವರಿಗೆ, ಆರೋಗ್ಯ ಸಿಬ್ಬಂದಿಗೆ ಲಸಿಕೆ ನೀಡಲಾಗುವುದು. 14 ಲ ಕೋವಿಶೀಲ್ಡ್ ಡೋಸ್ ದಾಸ್ತಾನು ಇದ್ದು, ಸೋಮವಾರ 5ರಿಂದ 7 ಲ ಡೋಸ್ ನೀಡುವ ಗುರಿ ಇರಿಸಲಾಗಿದೆ. ಇದಕ್ಕೆ ಜನರ ಸಹಕಾರ ಬೇಕಿದೆ. ಈವರೆಗೆ 1.80 ಕೋಟಿ ಲಸಿಕೆ ನೀಡಲಾಗಿದೆ. ಅಂದರೆ ದೇಶದಲ್ಲಿ ನೀಡಿದ 15 ಲಸಿಕೆಯಲ್ಲಿ ಒಂದು ರಾಜ್ಯದ್ದು ಎಂದು ಡಾ.ಕೆ.ಸುಧಾಕರ್ ವಿವರಿಸಿದರು.
ಸಚಿವರು ಕೊಟ್ಟ ಇತರ ಮಾಹಿತಿ
? ಹೊಸ ವೈರಾಣು ಅಧ್ಯಯನಕ್ಕೆ ಜಿನೋಮಿಕ್ಸ್ ಸಮಿತಿ ರಚನೆ. ? ಪ್ರತಿ ಜಿಲ್ಲಾ ಮಟ್ಟದಲ್ಲಿ ತರ ಸಮಿತಿ ರಚನೆ. ಈ ಸಮಿತಿ ನೀಡುವ ಮಾಹಿತಿ ಮೂಲಕ 3 ನೇ ಅಲೆ ನಿಯಂತ್ರಣ.
? ಡಾ.ದೇವಿಪ್ರಸಾದ್ ಶೆಟ್ಟಿ ಸಮಿತಿ 3ನೇ ಅಲೆ ಸಿದ್ಧತೆ ಕುರಿತು ಪ್ರಾಥಮಿಕ ವರದಿ ನೀಡಿದ್ದು, ಅದನ್ನು ಸಿಎಂಗೆ ತಲುಪಿಸಲಾಗುವುದು. ಅಂತಿಮ ವರದಿ ಬಂದ ಬಳಿಕ 45 ದಿನಗಳಲ್ಲಿ ಕಾರ್ಯರೂಪಕ್ಕೆ ಚಿಂತನೆ.
? ಡೆಲ್ಟಾ ವೈರಾಣು ವೇಗವಾಗಿ ಹರಡುತ್ತಿದೆ. ಇದಕ್ಕಾಗಿ ಡಿಸೆಂಬರ್ವರೆಗೂ ನಿತ್ಯ ಒಂದೂವರೆ ಲ ಪರೀೆ ಮಾಡಲು ಸೂಚನೆ.
? ಕೋವಿಡ್ ಎರಡು ಡೋಸ್ ಲಸಿಕೆ ಪಡೆದ ಶೇ.99.9 ಮಂದಿಗೆ ಸೋಂಕು ತಗುಲಿಲ್ಲ. ಸೋಂಕು ಬಂದರೂ ತೀವ್ರ ಸಮಸ್ಯೆ ಆಗಿಲ್ಲ.