ಮಾತೆ ಮಹಾದೇವಿ ಹೆಸರಿನಲ್ಲಿ ಮಹಿಳಾ ದಿನಾಚರಣೆ ಆಚರಿಸಿ

Celebrate Women's Day in the name of Mother Mahadevi
ಕೂಡಲಸಂಗಮ ಬಸವ ಧರ್ಮ ಪೀಠದ ಶರಣ ಲೋಕದಲ್ಲಿ ಮಾತೆ ಮಹಾದೇವಿ ಅವರ 79ನೇ ಜಯಂತಿ ಆಚರಿಸಲಾಯಿತು. ಮಹಾದೇಶ್ವರ ಸ್ವಾಮೀಜಿ, ಮಾತೆ ತುಂಗಾದೇವಿ, ಬೆಂಗಳೂರಿನ ದೇವಿಕಾ ಶರಣಪ್ಪ, ತುಮಕೂರಿನ ಸೋಮಶೇಖರಪ್ಪ, ಲೋಹಿತಾದೇವಿ, ಉಮಾದೇವಿ ಮತ್ತಿತರರಿದ್ದಾರೆ.
Published on

ಕೂಡಲಸಂಗಮ: ರಾಜ್ಯ ಸರ್ಕಾರ ಮಹಿಳಾ ದಿನಾಚರಣೆಯನ್ನು ಮಾತೆ ಮಹಾದೇವಿ ಅವರ ಹೆಸರಿನಲ್ಲಿ ಆಚರಿಸಬೇಕು ಎಂದು ಕೂಡಲಸಂಗಮ ಬಸವ ಧರ್ಮ ಪೀಠದ ಮಹಾದೇಶ್ವರ ಸ್ವಾಮೀಜಿ ಹೇಳಿದರು.

ಕೂಡಲಸಂಗಮ ಬಸವ ಧರ್ಮ ಪೀಠದ ಶರಣ ಲೋಕದಲ್ಲಿ ಗುರುವಾರ ಮಾತೆ ಮಹಾದೇವಿ 79ನೇ ಜಯಂತಿ ಅಂಗವಾಗಿ ಗದ್ದುಗೆಗೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.

ಧಾರ್ಮಿಕ ಕ್ಷೇತ್ರದಲ್ಲಿಯೂ ಮಹಿಳೆ ಸಾಧನೆ ಮಾಡಬಲ್ಲಳು ಎಂಬುದನ್ನು ಸಾಧಿಸಿ ತೋರಿಸಿದ ಮಾತೆ ಮಹಾದೇವಿ ಅವರ ಬದುಕು, ಹೋರಾಟ, ಸಂಘಟನೆ ಇಂದಿನ ವಿದ್ಯಾರ್ಥಿಗಳಿಗೆ ಮಾರ್ಗದರ್ಶಿಯಾಗಿದೆ. ರಾಜ್ಯದ ಯಾವುದಾದರೂ ವಿಶ್ವವಿದ್ಯಾಲಯದಲ್ಲಿ ಮಾತೆ ಮಹಾದೇವಿ ಅವರ ಹೆಸರಿನಲ್ಲಿ ಅಧ್ಯಯನ ಪೀಠ ಸ್ಥಾಪಿಸಬೇಕು. ವಚನ ಸಾಹಿತ್ಯ, ಶರಣರ ಸ್ಥಳಗಳ ಅಭಿವೃದ್ಧಿಗೆ ಅವರ ಕೊಡುಗೆ ಸ್ಮರಣೀಯವಾಗಿದೆ ಎಂದರು.

ಮಾತೆ ತುಂಗಾದೇವಿ, ಬೆಂಗಳೂರಿನ ದೇವಿಕಾ ಶರಣಪ್ಪ, ತುಮಕೂರಿನ ಸೋಮಶೇಖರಪ್ಪ, ಲೋಹಿತಾದೇವಿ, ಉಮಾದೇವಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net