ಕಡ್ಡಾಯವಾಗಿ ವಾಲ್ಮೀಕಿ ಜಯಂತಿ ಆಚರಿಸಿ

hnd 15-1 meeting
ಹುನಗುಂದ ತಹಸೀಲ್ದಾರ್ ಕಚೇರಿಯ ಸಭಾ ಭವನದಲಿ ನಡೆದ ಪೂರ್ವಭಾವಿ ಸಭೆಯಲ್ಲಿ ತಹಸೀಲ್ದಾರ್ ನಿಂಗಪ್ಪ ಬಿರಾದಾರ ಮಾತನಾಡಿದರು. ಎಂ.ಎಚ್. ಕಟ್ಟಿಮನಿ, ವೆಂಕಟೇಶ ಹೂಲಗೇರಿ, ಚಂದ್ರು ತಳವಾರ ಇದ್ದರು.
Published on

ಹುನಗುಂದ: ತಾಲೂಕಿನ ಎಲ್ಲ ಇಲಾಖೆಗಳ ಕಚೇರಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಕಡ್ಡಾಯವಾಗಿ ಆಚರಿಸಬೇಕೆಂದು ತಹಸೀಲ್ದಾರ್ ನಿಂಗಪ್ಪ ಬಿರಾದಾರ ಅಧಿಕಾರಿಗಳಿಗೆ ಸೂಚಿಸಿದರು.

ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಭವನದಲ್ಲಿ ತಾಲೂಕು ಆಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಅ.17 ರಂದು ನಡೆಯಲಿರುವ ವಾಲ್ಮೀಕಿ ಜಯಂತಿ ನಿಮಿತ್ತ ಮಂಗಳವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಶಾಲಾ ಕಾಲೇಜು, ಆಸ್ಪತ್ರೆ, ಎಲ್ಲ ಸರ್ಕಾರಿ ಕಚೇರಿ ಹಾಗೂ ಗ್ರಾಮ ಪಂಚಾಯಿತಿ, ಅಂಗನವಾಡಿ ಕೇಂದ್ರ, ಸಂಘ-ಸಂಸ್ಥೆಗಳಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿ ಜಯಂತಿ ಆಚರಿಸಬೇಕು ಎಂದರು.

ವಾಲ್ಮೀಕಿ ಸಮಾಜದ ಅಧ್ಯಕ್ಷ ಚಂದ್ರು ತಳವಾರ ಮಾತನಾಡಿ, ಅಧಿಕಾರಿಗಳು ವಾಲ್ಮೀಕಿ ಜಯಂತಿ ಆಚರಣೆ ಪೂರ್ವಭಾವಿ ಸಭೆ ಆಗಮಿಸುವುದಿಲ್ಲ. ಕಾಟಾಚಾರಕ್ಕೆ ವಾಲ್ಮೀಕಿ ಆಚರಿಸಬಾರದು ಎಂದು ತಿಳಿಸಿದರು.

ಸಮಾಜ ಕಲ್ಯಾಣ ಅಧಿಕಾರಿ ಎಂ.ಎಚ್. ಕಟ್ಟಿಮನಿ, ಲೋಕೋಪಯೋಗಿ ಇಲಾಖೆ ಸಹಾಯಕ ಅಧಿಕಾರಿ ವೆಂಕಟೇಶ ಹೂಲಗೇರಿ, ಪಿಎಸ್‌ಐ ಪ್ರಕಾಶ ಡಿ., ಹಿಂದುಳಿದ ಇಲಾಖೆ ಅಧಿಕಾರಿ ಸಂಗಮೇಶ ಗಡೇದ, ಮುಖಂಡರಾದ ಸೋಮಶೇಖರ ಬಲಕುಂದಿ, ವಿ.ಜಿ. ಗುಡದನ್ನವರ, ಹನುಮಂತ ಸುಣಕಲ್ಲ, ಹನುಮಂತ ತಳವಾರ, ಮಹಾಂತೇಶ ತಳವಾರ, ಆರ್.ಜಿ. ಸನ್ನಿ, ಎಚ್.ಟಿ. ರಂಗಾಪೂರ, ಸಿದ್ದಪ್ಪ ಜಾಲಿಗಿಡದ, ಯಮನಪ್ಪ ವಾಲೀಕಾರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net