ನಾಡಹಬ್ಬ ದಸರಾ ಶ್ರದ್ಧಾ&ಭಕ್ತಿಯಿಂದ ಆಚರಿಸಿ

Celebrate the national festival of Dussehra with faith and devotion.
Published on

ಜಮಖಂಡಿ:ನಾಡಹಬ್ಬ ದಸರಾ ದೇವಿಯ ಉತ್ಸವವನ್ನು ವಿಜೃಂಭಣೆಯಿಂದ ಅರ್ಥಪೂರ್ಣವಾಗಿ ಆಚರಿಸಬೇಕು. ಶ್ರದ್ಧಾ, ಭಕ್ತಿ ಜತೆಗೆ ದೇವಿ ಮೇಲೆ ನಂಬಿಕೆ ಇಟ್ಟು ಆಚರಿಸಬೇಕು ಎಂದು ಮುತ್ತಿನಕಂತಿ ಹಿರೇಮಠದ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯರು ಹೇಳಿದರು.ನಗರದ ಮುತ್ತಿನಕಂತಿ ಹಿರೇಮಠದ ಸಭಾಭವನದಲ್ಲಿ ಶನಿವಾರ ಶ್ರೀ ನಾಡದೇವಿ ಮಹಾಮಂಡಳ ಹಮ್ಮಿಕೊಂಡಿದ್ದ ದಸರಾ ಆಚರಣೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಶ್ರೀಗಳು, ಹಬ್ಬಗಳನ್ನು ಆಚರಿಸುವುದರಿಂದ ಆತ್ಮ ಶುದ್ಧಿ ಆಗುತ್ತದೆ. ದೇವರ ಆರಾಧನೆಯಿಂದ ಅಗಾಧವಾದ ಶಕ್ತಿ ಬರುತ್ತದೆ. ನಾಡದೇವಿಯನ್ನು ಭಕ್ತಿ ಪೂರ್ವಕವಾಗಿ ಪ್ರತಿಷ್ಠಾಪಿಸಬೇಕು ಎಂದರು.

ಮುಂಬರುವ ದಿನಗಳಲ್ಲಿ ನಗರದಲ್ಲಿ ಆಚರಿಸುವ ದಸರಾಹಬ್ಬ ಮೈಸೂರು ದಸರಾ ರೀತಿಯಲ್ಲಿ ದಸರಾ ದರ್ಬಾರ ನಡೆಸಿ ನಾಡಿನ ಜನ ವೀಸಲು ಇಲ್ಲಿಗೆ ಬರುವ ಹಾಗೆ ಆಚರಿಸಬೇಕು. ಪ್ರತಿಯೊಬ್ಬರೂ ಹಬ್ಬಗಳಲ್ಲಿ ಭಕ್ತಿಪೂರ್ವಕವಾಗಿ ಪಾಲ್ಗೊಳ್ಳಬೇಕು. ಯಾವುದೇ ರೀತಿಯ ಅವಡಗಳು ಸಂಭವಿಸದಂತೆ ಎಚ್ಚರ ವಹಿಸಬೇಕು ಎಂದು ತಿಳಿಸಿದರು

ಹಬ್ಬಗಳ ಆಚರಣೆಯೊಂದಿಗೆ ಪರಿಸರ ರಣೆಗಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ನಗರವನ್ನು ಸ್ವಚ್ಛವಾಗಿರಿಸಬೇಕು. ಹಬ್ಬಗಳಲ್ಲಿ ಡಿಜೆ ಮತ್ತು ಪಟಾಕಿಗಳ ಬಳಕೆ ಕಡಿಮೆ ಮಾಡಬೇಕು. ಪ್ರತಿಯೊಬ್ಬರೂ ಜಲ ಮಾಲಿನ್ಯ, ವಾಯು ಮಾಲಿನ್ಯವನ್ನು ತಡೆಗಟ್ಟುವ ಮೂಲಕ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು. ಗಿಡ&ಮರಗಳನ್ನು ಬೆಳೆಸುವ ಮೂಲಕ ಹಸಿರು ಪರಿಸರ ಪರಂಪರೆಯನ್ನು ಮುಂದಿನ ಪೀಳಿಗೆಗೆ ನೀಡಬೇಕಾಗಿದೆ ಎಂದು ಹೇಳಿದರು.

ನ್ಯಾಯವಾದಿ ಡಾ.ಮಲ್ಲಿಕಾರ್ಜುನ ಮಠ ಮಾತನಾಡಿ, ಹಬ್ಬಗಳನ್ನು ಭಕ್ತಿಭಾವದಿಂದ ಆಚರಿಸಬೇಕು. ಗಣೇಶ ಉತ್ಸವದಷ್ಟು ಪ್ರಾಮುಖ್ಯವನ್ನು ದಸರಾ ಹಬ್ಬಕ್ಕೂ ನೀಡಬೇಕು. ಜಗತ್ತಿಗೆ ಆಧ್ಯಾತ್ಮಿಕ ಮಾರ್ಗ ಜಮಖಂಡಿಯಿಂದ ಪ್ರಾರಂಭವಾಗುತ್ತದೆ ಎಂದರು.

ನಾಡಹಬ್ಬ ಮಹಾಮಂಡಳದ ಸಂಸ್ಥಾಪಕ ಅಧ್ಯ ರುದ್ರಯ್ಯ ಕರಡಿ, ರತ್ನಾ ಶೇಠ ಮಾತನಾಡಿದರು. ನಾಡದೇವಿ ಮಹಾಮಂಡಳದ ನೂತನ ಅಧ್ಯರಾಗಿ ಗಂಗಾಧರ ತೆಲಬಕ್ಕನ್ನವರ, ಉಪಾಧ್ಯರಾಗಿ ರತ್ನಾ ಸಾಲಿಮಠ ಅವರನ್ನು ಅವಿರೋಧ ಆಯ್ಕೆ ಮಾಡಲಾಯಿತು. ನಿಕಟ ಪೂರ್ವ ಅಧ್ಯ ರಾಜು ತೆಳಗಿಹಾಳ, ಜಗದಯಲ್ಲಮ್ಮ ದೇವಸ್ಥಾನ ಅರ್ಚಕ ಪರಶುರಾಮ, ರೂಗಿ ಯಲ್ಲಮ್ಮ ದೇವಸ್ಥಾನದ ಅರ್ಚಕ ಪರಶುರಾಮ ಪೂಜಾರಿ ಇದ್ದರು.

ಜಮಖಂಡಿ ನಗರದ ಮುತ್ತಿನಕಂತಿ ಹಿರೇಮಠದ ಸಭಾಭವನದಲ್ಲಿ ದಸರಾ ಆಚರಣೆಯ ಪೂರ್ವಭಾವಿ ಸಭೆಯಲ್ಲಿ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು ಮಾತನಾಡಿದರು. ರುದ್ರಯ್ಯ ಕರಡಿ, ರತ್ನಾ ಶೇಠ, ಗಂಗಾಧರ ತೆಲಬಕ್ಕನ್ನವರ, ರತ್ನಾ ಸಾಲಿಮಠ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net