ಶಾಂತಿ ಭಂಗವಾಗದಂತೆ ಹಬ್ಬ ಆಚರಿಸಿ

4 anr shathisabe
ಕುಂಸಿ ಪೊಲೀಸ್ ಠಾಣೆ ಆವರಣದಲ್ಲಿ ಏರ್ಪಡಿಸಿದ್ದ ಶಾಂತಿಸಭೆಯಲ್ಲಿ ಹರೀಶ್ ಪಾಟೀಲ್, ಪಾರ್ವತಿ ಬಾಯಿ, ಶಾಂತರಾಜ್, ಶಿವನಗೌಡ ಇತರರಿದ್ದರು.
Published on

ಆಯನೂರು: ಪ್ರತಿಯೊಂದು ಹಬ್ಬಗಳು ಸಂಸ್ಕೃತಿಯ ದ್ಯೋತಕವಾಗಿದ್ದು, ಅವುಗಳದ್ದೆ ಆಗಿರುವ ವೈಶಿಷ್ಟತೆಯಿಂದ ಕೂಡಿರುತ್ತವೆ. ಜನರು ಶಾಂತಿ, ಸೌಹಾರ್ದತೆಯಿಂದ ಹಬ್ಬಗಳನ್ನು ಆಚರಿಸಬೇಕು ಎಂದು ಇನ್‌ಸ್ಪೆಕ್ಟರ್ ಹರೀಶ್ ಪಟೇಲ್ ತಿಳಿಸಿದರು.

ಕುಂಸಿ ಪೊಲೀಸ್ ಠಾಣೆ ಆವರಣದಲ್ಲಿ ಗೌರಿ-ಗಣೇಶ ಹಾಗೂ ಈದ್ ಮಿಲಾದ್ ಹಬ್ಬ ನಿಮಿತ್ತ ಭಾನುವಾರ ಏರ್ಪಡಿಸಿದ್ದ ಶಾಂತಿ ಸಭೆಯಲ್ಲಿ ಮಾತನಾಡಿ, ಗಣಪತಿ ಮೂರ್ತಿ ಪ್ರತಿಷ್ಠಾಪನಾ ಸ್ಥಳದ ಮಾಹಿತಿ ನೀಡಿ, ಅನುಮತಿ ಪಡೆಯುವುದು ಕಡ್ಡಾಯ. ನಮಗಿಂತಲೂ ಕಮಿಟಿಯವರಿಗೆ ಜವಾಬ್ದಾರಿ ಹೆಚ್ಚು. ಇಲಾಖೆಯೂ ನಿಮಗೆ ಸಂಪೂರ್ಣ ಸಹಕಾರ ನೀಡಲಿದೆ. ಆದರೆ ಇದರಿಂದ ಯಾವುದೇ ಕಾರಣಕ್ಕೂ ಸಾರ್ವಜನಿಕರಿಗೆ ತೊಂದರೆ ಆಗಬಾರದು ಎಂದರು.
ಪಿಎಸ್‌ಐಗಳಾದ ಶಾಂತರಾಜ್, ಶಿವನಗೌಡ, ಪಾರ್ವತಿ ಬಾಯಿ, ಮುಖ್ಯಪೇದೆ ಪ್ರಕಾಶ್, ಆಯನೂರು, ಹಾರನಹಳ್ಳಿ, ಕುಂಸಿ, ಚೋರಡಿ, ಸಿರಿಗೆರೆ, ತಮ್ಮಡಿಹಳ್ಳಿ, ಮಲ್ಲಾಪುರ ಹಾಗೂ ಸುತ್ತಲಿನ ಗ್ರಾಮಗಳ ಗಣಪತಿ ಸಮಿತಿ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net