ಅಹಿತಕರ ಘಟನೆ ನಡೆಯದಂತೆ ಹಬ್ಬ ಆಚರಿಸಿ

SANSHI MEETING
Published on

ಸಂಶಿ: ಯಾವುದೇ ಅಹಿತಕರ ಘಟನೆ ನಡೆಯದಂತೆ ಗಣೇಶ ಚೌತಿ ಮತ್ತು ಈದ್ ಮಿಲಾದ್ ಹಬ್ಬಗಳನ್ನು ಆಚರಿಸಬೇಕು ಎಂದು ಪಿ ಎಸ್ ಐ ಪ್ರವೀಣ ನೇಸರಗಿ ಹೇಳಿದರು.

ಸಮೀಪದ ಯರೇಬೂದಿಹಾಳ ಗ್ರಾಮದಲ್ಲಿ ಗಣೇಶ ಚರ್ತಥಿ ಮತ್ತು ಈದ್ ಮಿಲಾದ್ ಹಬ್ಬದ ಪ್ರಯುಕ್ತ ಗುಡಗೇರಿ ಪೊಲೀಸ್ ಠಾಣೆ ವತಿಯಿಂದ ಸೋಮವಾರ ಕರೆದಿದ್ದ ಪೂರ್ವಭಾವಿ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು. ಪೊಲೀಸ್ ಠಾಣೆ ಮತ್ತು ಕೆಎಬಿಯಿಂದ ಅನುಮತಿ ಪತ್ರ ತೆಗೆದುಕೊಂಡು ಸಾರ್ವಜನಿಕ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಬೇಕು ಎಂದರು.

ಈ ವೇಳೆ ಗ್ರಾಮಸ್ಥರು ಪಿಎಸ್​ಐ ಪ್ರವೀಣ ನೇಸರಗಿ ಅವರನ್ನು ಸನ್ಮಾನಿಸಿದರು. ಹಬ್ಬದ ಭದ್ರತೆಗೆ ಗ್ರಾಮಕ್ಕೆ ಹೋಮ್ಾರ್ಡ್ ಬದಲು ಠಾಣಾ ಸಿಬ್ಬಂದಿಯನ್ನೇ ನಿಯೋಜಿಸಬೇಕು ಎಂದು ಗ್ರಾಮಸ್ಥರು ಬೇಡಿಕೆ ಇಟ್ಟರು.

ಗಿರಿಜವ್ವ ಬೂದಗಣ್ಣವರ, ರತ್ನವ್ವ ಕರಡಿ, ಮಹದೇವಪ್ಪ ಪೂಜಾರ, ಬಸವರಾಜ ಖಂಡಾರಿ, ಪ್ರವೀಣ ದೊಡ್ಡಗಾಣಗೇರ, ಈರಣ್ಣ ಕಾರಡಗಿ, ಮೈಲಾರಪ್ಪ ಯಲವಿಗಿ, ಮಂಜುನಾಥ ಪೂಜಾರ, ಮುತ್ತು ಹುಂಬಿ, ನಿಂಗಪ್ಪ ಕಾರಡಗಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net