

ನೆಲಮಂಗಲ : ಗಣೇಶೋತ್ಸವ ಮತ್ತು ಈದ್ ಮಿಲಾದ್ ಹಬ್ಬಗಳನ್ನು ಹಿಂದು&ಮುಸ್ಲಿಮರು ಶಾಂತಿ, ಸೌಹಾರ್ದತೆಯೊಂದಿಗೆ ಧಾರ್ಮಿಕ ಭಾವನೆಗೆ ದಕ್ಕೆಯಾಗದಂತೆ ಆಚರಿಸಬೇಕು ಎಂದು ನಗರ ಠಾಣೆ ಆರಕ್ಷಕ ನಿರೀಕ್ಷಕ ಭರತ್ಗೌಡ ತಿಳಿಸಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಗರ ಪೊಲೀಸ್ ಠಾಣೆ ಹಾಗೂ ನಗರಸಭೆ ಸಹಯೋಗದಲ್ಲಿ ಪ್ರಯುಕ್ತ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದರು. ಗಣೇಶ ಮಂಡಳಿಯವರು ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಪರವಾನಗಿ ಪಡೆದು ಮಂಟಪ ನಿರ್ಮಿಸಬೇಕು. ಆಯಾ ಪ್ರದೇಶದ ಜನ ಪ್ರತಿನಿಧಿಗಳು, ಹಿರಿಯರು ಜವಾಬ್ದಾರಿ ವಹಿಸಿಕೊಳ್ಳಬೇಕು.
ಸಮಾಜದ ಸ್ವಾಸ್ಥ$್ಯ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕೈಗೊಳ್ಳುವ ಕ್ರಮಗಳಿಗೆ ಎಲ್ಲರೂ ಸಹಕಾರ ನೀಡಬೇಕು. ಗಣೇಶೋತ್ಸವ ಆಚರಣೆಗೆ ಸಂಟನೆಗಳು ಪೊಲೀಸರಿಂದ ಹಾಗೂ ಸಂಬಂಧಿಸಿದ ಇತರ ಕಚೇರಿಗಳಿಂದಲೂ ಕಡ್ಡಾಯವಾಗಿ ಅನುಮತಿ ಪಡೆಯಬೇಕು ಎಂದರು. ನಗರಸಭೆ ಸದಸ್ಯ ಶಿವಕುಮಾರ್, ನಗರ ಠಾಣೆ ಸಬ್ ಇನ್ಸ್ಸ್ಪೆಕ್ಟರ್ ನಂಜಯ್ಯ, ಧನರಾಜ್, ಎಎಸ್ಐ ಬಿ.ಎಸ್.ರು, ಸಿಬ್ಬಂದಿ ಚನ್ನೇಗೌಡ, ಪ್ರದಿಪ್, ಲ್ಮಕಾಂತ್, ಅವಿನಾಶ್, ಗಣೇಶ್, ಮಧನ್ಕುಮಾರ್, ಶಿವಕುಮಾರ್, ಆಕಾಶ್, ನಗರಸಭೆ ಆರೋಗ್ಯ ನಿರೀಕ್ಷಕ ಬಿಜಿ, ಉಮೇಶ್, ಸಮುದಾಯ ಸಂಟಕ ನಾರಾಯಣ್ಸ್ವಾಮಿ ಇದ್ದರು.
ಅನುಮತಿ,ಸುರಕ್ಷತೆ ಕಡ್ಡಾಯ : ಗಣಪತಿ ಪ್ರತಿಷ್ಠಾಪನೆಗೂ ಮುನ್ನ ಪೊಲೀಸ್ ಇಲಾಖೆ, ಸ್ಥಳಿಯ ಆಡಳಿತ, ಅಗ್ನಿಶಾಮಕ ಇಲಾಖೆ, ಬೆಸ್ಕಾಂ ಇಲಾಖೆಯಿಂದ ಅನುಮತಿ ಪಡೆಯಬೇಕು. ಗಣಪತಿ ಮೆರವಣಿಗೆ ಸಾಗುವ ಮಾರ್ಗವನ್ನು ಸ್ಪಷ್ಟವಾಗಿ ನಮೂದಿಸಬೇಕು. ಸುರಕ್ಷತೆಯ ಉದ್ದೇಶದಿಂದ ಕಡ್ಡಾಯವಾಗಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿಕೊಳ್ಳಬೇಕು ಎಂದು ಆರಕ್ಷಕ ನಿರೀಕ್ಷಕ ಭರತ್ಗೌಡ ಸೂಚನೆ ನೀಡಿದರು.
ಪಿಒಪಿ ಮೂರ್ತಿ ನಿಷೇಧ : ಪಿಒಪಿ ಗಣೇಶ ಮೂರ್ತಿಗಳನ್ನು ಯಾರೂ ಮಾರಾಟ ಮಾಡಬಾರದು. ಪರಿಸರ ಸ್ನೇಹಿ ಗಣೇಶ ಮೂರ್ತಿಯನ್ನು ಮಾರಾಟ ಹಾಗೂ ಪ್ರತಿಷ್ಠಾಪಿಸಬೇಕು. ನಗರದಲ್ಲಿ ಮನೆಗಳ ಗಣಪತಿ ವಿಸರ್ಜನೆಗೆ ಮೊಬೈಲ್ ಟ್ಯಾಂಕರ್ ವ್ಯವಸ್ಥೆ ಸೇರಿ ಪ್ರತಿವರ್ಷದಂತೆ ಭಕ್ತನಪಾಳ್ಯ ರಸ್ತೆಯಲ್ಲಿ ತಾತ್ಕಾಲಿಕ ಹೊಂಡ ನಿರ್ಮಿಸಿ ಗಣಪತಿ ವಿಸರ್ಜನೆ ಅವಕಾಶ ಕಲ್ಪಿಸಲಾಗುವುದು ಎಂದು ನಗರಸಭೆ ಪೌರಾಯುಕ್ತ ಗಂಗಾಧರ್ ಹೇಳಿದರು.