

ತಾಳಿಕೋಟೆ: ಹಬ್ಬಗಳು ಪ್ರೀತಿ, ಪ್ರೇಮ ಹಾಗೂ ಸೌಹಾರ್ದದ ಸಂಕೇತಗಳಾಗಿವೆ ಎಂದು ಮುದ್ದೇಬಿಹಾಳ ಸಿಪಿಐ ಮಹ್ಮದ್‌ಪಶಿಉದ್ದೀನ್ ನುಡಿದರು.
ಹೋಳಿ ಹಬ್ಬ ಹಾಗೂ ರಂಜಾನ್ ಹಬ್ಬ ಮತ್ತು ಶ್ರೀ ಶರಣಮುತ್ಯಾರ ರಥೋತ್ಸವ ನಿಮಿತ್ತ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತಾಳಿಕೋಟೆ ಪಟ್ಟಣದಲ್ಲಿ 3 ಹಬ್ಬಗಳ ಆಚರಣೆ ಏಕಕಾಲದಲ್ಲಿ ಬಂದಿದ್ದು, ಸಾರ್ವಜನಿಕರ ಶಾಂತಿಯುತವಾಗಿ ಹಬ್ಬ ಆಚರಿಸಬೇಕು. ಹಬ್ಬದ ವೇಳೆ ಶಾಂತಿ ಕದಡುವಂತ ಘಟನೆಗಳಿಗೆ ಅವಕಾಶ ನೀಡಬಾರದು. 13 ಹೋಳಿ ಸುಡುವುದು. 14 ಹಾಗೂ 15 ರಂದು 2ದಿನ ಬಣ್ಣದಾಟ ನಡೆಯಲಿದೆ. ಎಲ್ಲರೂ ಸೌಹಾರ್ದತಯುತವಾಗಿ ಹಬ್ಬ ಆಚರಿಸಬೇಕು ಎಂದರಲ್ಲದೆ, 19 ರಂದು ಶರಣ ಮುತ್ಯಾರ ರಥತೋತ್ಸವ ನಡೆಯಲಿದೆ. ಅಲ್ಲದೆ, ಮುಸ್ಲಿಂರ ರಂಜಾನ್ ಹಬ್ಬದ ಉಪವಾಸ ಇರುವುದರಿಂದ ಎಲ್ಲರೂ ಸೇರಿ ಸೌಹಾರ್ದಯುತವಾಗಿ ಹಬ್ಬ ಆಚರಿಸಬೇಕು ಎಂದು ತಿಳಿಸಿದರು.
ಪಿಎಸ್‌ಐ ರಾಮನಗೌಡ ಸಂಕನಾಳ ಮಾತನಾಡಿ, ಜಾತ್ರೆ, ರಂಜಾನ್ ಹಬ್ಬವನ್ನು ಎಲ್ಲ ಕೋಮಿನವರು ಪ್ರೀತಿ- ಪ್ರೇಮದಿಂದ ಶಾಂತಿಯುತವಾಗಿ ಆಚರಿಸಬೇಕು ಎಂದು ತಿಳಿಸಿದರು.
ಶಾಂತಿ ಸಮಿತಿ ಸದಸ್ಯರುಗಳಾದ ಪ್ರಭುಗೌಡ ಮದರಕಲ್ಲ, ವಿಜಯಸಿಂಗ್ ಹಜೇರಿ, ಬಿ.ಎಸ್. ಪಾಟೀಲ(ಯಾಳಗಿ), ಶಿವಶಂಕರ ಹಿರೇಮಠ, ಶರಣಗೌಡ ಪಾಟೀಲ, ಜೈಭೀಮ ಮುತ್ತಗಿ ಮಾತನಾಡಿದರು. ಸಿದ್ದನಗೌಡ ಪಾಟೀಲ, ಮುರುಗೆಪ್ಪ ಸರಶೆಟ್ಟಿ, ಕಾಶಿನಾಥ ಮುರಾಳ, ಎಂ.ಕೆ. ಚೋರಗಸ್ತಿ, ಡಿ.ವಿ. ಪಾಟೀಲ, ಅಣ್ಣಪ್ಪ ಜಗತಾಪ, ದತ್ತು ಹೆಬಸೂರ, ಆನಂದ ಹಜೇರಿ, ಮುತ್ತಪ್ಪ ಚಮಲಾಪೂರ, ಯಾಜ್ ಉತ್ನಾಳ, ನಿಂಗು ಕುಂಟೋಜಿ, ಗುರಣ್ಣ ಹತ್ತೂರ, ಗನಿಸಾಬ ಲಾಹೋರಿ, ಮಲ್ಲಣ್ಣ ಇಂಗಳಗಿ, ಮಲ್ಲಣ್ಣ ಶರಣರು, ಭೀಮಣ್ಣ ಇಂಗಳಗಿ, ಸಿದ್ದಣ್ಣ ಶರಣರ, ಈರಣ್ಣ ಶರಣರ, ಆಸೀಫ್ ಕೆಂಭಾವಿ, ಗೋಪಾಲ ಕಟ್ಟಿಮನಿ ಇತರರಿದ್ದರು.
ಅಪರಾದ ವಿಭಾಗದ ಪಿಎಸ್‌ಐ ಆರ್.ಎಸ್. ಭಂಗಿ ಸ್ವಾಗತಿಸಿ, ನಿರೂಪಿಸಿದರು.