ಶಾಂತಿಯುತವಾಗಿ ಹಬ್ಬ ಆಚರಿಸಿ

Celebrate the festival peacefully
ಜಮಖಂಡಿ ಶಹರ ಠಾಣೆ ಸಭಾಭವನದಲ್ಲಿ ಬಕ್ರೀದ್ ಹಬ್ಬದ ನಿಮಿತ್ತ ಜಮಖಂಡಿ ಶಹರ ಮತ್ತು ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ನಡೆದ ಶಾಂತಿ ಪಾಲನಾ ಸಭೆಯಲ್ಲಿ ಡಿವೈಎಸ್‌ಪಿ ಶಾಂತವೀರ ಈ. ಮಾತನಾಡಿದರು. ರಾಜೇಸಾಬ ಕಡಕೋಳ, ಮುಸ್ತಾಕ್ ಝೇಂಡೆ, ಜಾಕೀರ್‌ಹುಸೇನ್ ನದಾಫ್ ಇತರರಿದ್ದರು.
Published on

ಜಮಖಂಡಿ: ಪ್ರತಿಯೊಂದು ಹಬ್ಬಗಳನ್ನು ಎಲ್ಲರೂ ಹೊಂದಾಣಿಕೆಯಿಂದ ಆಚರಿಸಬೇಕು. ಆಷಾಢ ಏಕಾದಶಿ, ಹನುಮಾನ ಓಕುಳಿ ಸಹಿತ ಅನೇಕ ಹಬ್ಬಗಳನ್ನು ಆಚರಿಸುವಂತೆ ಬಕ್ರೀದ್ ಕೂಡ ತ್ಯಾಗ-ಬಲಿದಾನದ ಪವಿತ್ರ ಹಬ್ಬವಾಗಿದ್ದು, ಎಲ್ಲ ಸಮುದಾಯದವರು ಶಾಂತಿಯುತವಾಗಿ ಆಚರಿಸಬೇಕೆಂದು ಡಿವೈಎಸ್‌ಪಿ ಶಾಂತವೀರ ಈ. ಹೇಳಿದರು.

ಸ್ಥಳೀಯ ಶಹರ ಠಾಣೆ ಸಭಾಭವನದಲ್ಲಿ ಬಕ್ರೀದ್ ಹಬ್ಬದ ನಿಮಿತ್ತ ಜಮಖಂಡಿ ಶಹರ ಹಾಗೂ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಹಮ್ಮಿಕೊಂಡಿದ್ದ ಹಿಂದು-ಮುಸ್ಲಿಂ ಸಮಾಜದ ನಾಯಕರ ಶಾಂತಿಪಾಲನಾ ಸಭೆಯಲ್ಲಿ ಅವರು ಮಾತನಾಡಿದರು.

ಹಬ್ಬಗಳನ್ನು ಶಾಂತಿಯುತವಾಗಿ ಆಚರಿಸಲು ಇಲಾಖೆ ಸಂಪೂರ್ಣ ಸಹಕಾರ ನೀಡುತ್ತದೆ. ಅನಗತ್ಯವಾಗಿ ಬೈಕ್ ಓಡಿಸುವವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ತಾಲೂಕಿನ ಜನರು ಪೊಲೀಸ್ ಇಲಾಖೆ ಮೇಲೆ ಇಟ್ಟಿರುವ ಅಭಿಮಾನ, ಹೊಂದಾಣಿಕೆ ಮೆಚ್ಚುವಂತವಾಗಿದೆ. ಪ್ರತಿಯೊಂದು ಶಾಂತಿಪಾಲನಾ ಸಭೆಯಲ್ಲಿ ಹೊಸದೊಂದು ವಿಷಯ ಪ್ರಸ್ತಾಪಗೊಂಡು ಸರಿಪಡಿಸಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ ಎಂದು ತಿಳಿಸಿದರು.

ರಾಜೇಸಾಬ ಕಡಕೋಳ, ಮುಸ್ತಾಕ್ ಝೇಂಡೆ, ಜಾಕೀರ್‌ಹುಸೇನ್ ನದಾಫ್, ಪ್ರದೀಪ ಮೆಟಗುಡ್ಡ, ನಗರಸಭೆ ಮಾಜಿ ಅಧ್ಯಕ್ಷ ಸಿದ್ದು ಮೀಸಿ, ಡಾ. ರಾಕೇಶ ಲಾಡ ಮಾತನಾಡಿದರು.

ಸಿಪಿಐ ಗುರುನಾಥ ಚವ್ಹಾಣ್ ಸ್ವಾಗತಿಸಿದರು. ಶಹರ ಠಾಣೆ ಪಿಎಸ್‌ಐ ನಾಗರಾಜ ಖಿಲಾರೆ ನಿರೂಪಿಸಿದರು. ಗ್ರಾಮೀಣ ಪಿಎಸ್‌ಐ ಮಹೇಶ ಸಂಖ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net