ಶಾಂತಿಯುತವಾಗಿ ಹಬ್ಬ ಆಚರಿಸಿ

bakreed
Published on

ಲಕ್ಷ್ಮೇಶ್ವರ: ಬಕ್ರೀದ್ ಹಬ್ಬವನ್ನು ಸಮಾಜ ಬಾಂಧವರು ಶಾಂತಿಯುತವಾಗಿ ಆಚರಿಸಬೇಕು ಎಂದು ಸಿಪಿಐ ವಿಕಾಸ ಲಮಾಣಿ ಹೇಳಿದರು.

ಹಬ್ಬದ ನಿಮಿತ್ತ ಪೊಲೀಸ್ ಠಾಣೆಯಲ್ಲಿ ಏರ್ಪಡಿಸಿದ್ದ ಶಾಂತಿ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಪಟ್ಟಣವು ಶಾಂತಿ- ಸೌಹಾರ್ದಕ್ಕೆ ಹೆಸರಾಗಿದೆ. ಎಲ್ಲ ಸಮಾಜದವರು ಅನ್ಯೋನ್ಯದಿಂದ ಎಲ್ಲ ಹಬ್ಬಗಳನ್ನು ಆಚರಿಸುತ್ತಿದ್ದಾರೆ. ಇಂತಹ ವಾತಾವರಣದಲ್ಲಿ ಕಿಡಿಗೇಡಿಗಳು ಶಾಂತಿ ಕದಡಲು ಮುಂದಾದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಯಾವುದೇ ಅಹಿತಕರ ಘಟನೆ ನಡೆಯದಂತೆ ನಿಗಾ ವಹಿಸಲಾಗುವುದು ಮತ್ತು ಇಲಾಖೆಯೊಂದಿಗೆ ಎಲ್ಲರಿಗೂ ಸಹಕರಿಸಬೇಕು ಎಂದು ಮನವಿ ಮಾಡಿದರು.

ಪಿಎಸ್‌ಐ ಯೂಸೆಫ್ ಜಮೂಲಾ, ಅಂಜುಮನ್ ಇಸ್ಲಾಂ ಕಮಿಟಿ ಅಧ್ಯಕ್ಷ ಎಂ.ಎಂ. ಗದಗ, ಗಂಗಾಧರ ಮೆಣಸಿನಕಾಯಿ, ಮುಪ್ತಿ ಅತ್ತಾರ ಮೌಲ್ವಿ, ಶರಣು ಗೋಡಿ, ಪಶುವೈದ್ಯಾಧಿಕಾರಿ ಎಂ.ಎನ್. ಹವಳದ ಮಾತನಾಡಿದರು.

ಎ.ಜಿ. ಸೂರಣಗಿ, ಯೂನಿಸ್ ಚೌರಿ, ಪಿರ್ದೂಸ್ ಆಡೂರ, ಜಾಕೀರ ಹವಾಲ್ದಾರ, ಶಿರಾಜ ಹೊಸಮನಿ, ಇಕ್ಬಾಲ್ ಸೂರಣಗಿ, ಅಮರೇಶ ತೆಂಬದಮನಿ, ಪ್ರಕಾಶಗೌಡ ಪಾಟೀಲ, ಶಿರಾಜ್ ಡಾಲಾಯತ್, ಭರಮಣ್ಣ ಶರಸೂರಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net