ಶಾಂತಿ ಸೌಹಾರ್ದದಿಂದ ಹಬ್ಬ ಆಚರಿಸಿ

Celebrate the festival in peace and harmony.
ಕೆರೂರ ಪೊಲೀಸ್ ಠಾಣೆ ಆವರಣದಲ್ಲಿ ಅಯೋಜಿಸಿದ್ದ ಶಾಂತಿ ಸಭೆಯಲ್ಲಿ ಸಿಪಿಐ ಕರಿಯಪ್ಪ ಬನ್ನೆ ಮಾತನಾಡಿದರು. ಡಿವೈಎಸ್‌ಪಿ ವಿಶ್ವನಾಥರಾವ್ ಕುಲಕರ್ಣಿ, ವೀರೇಶ ಬಡಿಗೇರ, ಎಂ. ಹಿರೇಗೌಡರ, ಮೋದಿನಸಾಬ ಚಿಕ್ಕೂರ, ವಿಠ್ಠಲಗೌಡ ಗೌಡರ, ಗುಂಡಣ್ಣ ಬೋರಣ್ಣವರ, ಅಶೋಕ ಜೀಗಳೂರ ಮತ್ತಿತರರಿದ್ದಾರೆ.
Published on

ಕೆರೂರ: ಪಟ್ಟಣದಲ್ಲಿ ಹೋಳಿ ಹಾಗೂ ರಂಜಾನ್ ಹಬ್ಬವನ್ನು ಶಾಂತಿ ಮತ್ತು ಸೌಹಾರ್ದದಿಂದ ಆಚರಿಸಬೇಕು ಎಂದು ಡಿವೈಎಸ್‌ಪಿ ವಿಶ್ವನಾಥರಾವ್ ಕುಲಕರ್ಣಿ ಹೇಳಿದರು.

ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಒತ್ತಾಯಪೂರ್ವಕವಾಗಿ ಬಣ್ಣ ಹಚ್ಚದೆ, ಸ್ನೇಹಿತರು ಹಾಗೂ ಪರಿಚಯಸ್ಥರೊಂದಿಗೆ ಸಂಭ್ರಮಿಸಿ. ಪರೀಕ್ಷೆಗೆ ತೆರಳುತ್ತಿರುವ ವಿದ್ಯಾರ್ಥಿಗಳಿಗೆ ತೊಂದರೆ ನೀಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.

ಸಿಪಿಐ ಕರಿಯಪ್ಪ ಬನ್ನೆ ಮಾತನಾಡಿ, ಕಾನೂನಿನ ಚೌಕಟ್ಟಿನಲ್ಲಿ ಹಬ್ಬವನ್ನು ಆಚರಿಸಬೇಕು. ಒಬ್ಬರ ಸಂಭ್ರಮ ಇನ್ನೊಬ್ಬರಿಗೆ ತೊಂದರೆಯಾಗಬಾರದು. ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಸಿಬ್ಬಂದಿ ನಿಗಾವಹಿಸಬೇಕು ಎಂದರು.

ಉಪತಹಸೀಲ್ದಾರ್ ವೀರೇಶ ಬಡಿಗೇರ, ಕ್ರೈಂ ಪಿಎಸ್‌ಐ ಎಂ. ಹಿರೇಗೌಡರ, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಮೋದಿನಸಾಬ ಚಿಕ್ಕೂರ, ಪ.ಪಂ ಸದಸ್ಯ ವಿಠ್ಠಲಗೌಡ ಗೌಡರ, ಗುಂಡಣ್ಣ ಬೋರಣ್ಣವರ, ಅಶೋಕ ಜಿಗಳೂರ, ಅಶೋಕ ಹರಣಶಿಕಾರಿ, ಸಂಜು ಚಿಮ್ಮನಕಟ್ಟಿ, ಅರುಣ ಕಟ್ಟಿಮನಿ, ಉಸ್ಮಾನ ಮುಲ್ಲಾ, ಫಾರೂಕ್ ಪೆಂಡಾರಿ, ಮೋದಿನಸಾಬ ದೊಡಕಟ್ಟಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net