

ಹುನಗುಂದ: ಪಟ್ಟಣದಲ್ಲಿ ಸೆ.2 ರಂದು ನಡೆಯಲಿರುವ ಸಂಗಮೇಶ್ವರ ಜಾತ್ರಾ ಮಹೋತ್ಸವವನ್ನು ಶಾಂತಿಯುತವಾಗಿ ಆಚರಿಸಬೇಕೆಂದು ಹುನಗುಂದ ಪಿಎಸ್‌ಐ ಚನ್ನಯ್ಯ ದೇವೂರ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಸಂಗಮೇಶ್ವರ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಮಹಾ ರಥೋತ್ಸವ ಸೇರಿ ಧಾರ್ಮಿಕ ಕಾರ್ಯಕ್ರಮಗಳನ್ನು ಪ್ರತಿ ವರ್ಷಕ್ಕಿಂತ ಮುಂಚಿತವಾಗಿ ನಡೆಸಲಾಗುತ್ತಿದೆ. ರಾಜ್ಯದ ಕೆಲವೆಡೆ ಕಿಡಿಗೇಡಿಗಳಿಂದ ಅಹಿತಕರ ಘಟನೆಗಳು ನಡೆಯುತ್ತಿವೆ. ಭಕ್ತರಿಗೆ ತೊಂದರೆ ಆಗದಂತೆ ಪೊಲೀಸ್ ಇಲಾಖೆಯಿಂದ ಸಿಬ್ಬಂದಿ ನಿಯೋಜಿಸಿ ಸಿಸಿಟಿವಿ ಅಳವಡಿಸಿ ಕಟ್ಟೆಚ್ಚರ ವಹಿಸಲಾಗುವುದೆಂದು ತಿಳಿಸಿದರು.
ದೇವಸ್ಥಾನ ಕಮಿಟಿ ಅಧ್ಯಕ್ಷ ಶೇಖರಪ್ಪ ಬಾದವಾಡಗಿ, ಮುಖಂಡ ಮಹಾಂತೇಶ ಅವಾರಿ, ರವಿ ಹುಚನೂರ, ಮಹೇಶ ಬೆಳ್ಳಿಹಾಳ, ಜಬ್ಬಾರ ಕಲಬುರ್ಗಿ, ರಾಮನಗೌಡ ಬೆಳ್ಳಿಹಾಳ, ಹನುಮಂತಪ್ಪ ಬೆನಕನಡೋಣಿ, ಮಲ್ಲು ಚೂರಿ, ಗಿರಿಮಲ್ಲಪ್ಪ ಹಳಪೇಟಿ, ಶಾಂತಪ್ಪ ಹೊಸಮನಿ, ಮಹಾಂತೇಶ ಮುಕ್ಕಣ್ಣವರ, ಮಲ್ಲು ಅಂಟರತಾನಿ, ಈಶಪ್ಪ ಹವಾಲ್ದಾರ್, ಮುನ್ನಾ ಬಾಗವಾನ, ದಾನಪ್ಪ ಕೆಂದೂರ ಇತರರಿದ್ದರು.