ಸಂವಿಧಾನ ಶಿಲ್ಪಿಯ ಜನ್ಮದಿನ ಹಬ್ಬವಾಗಲಿ

Celebrate the birthday of the architect of the Constitution
ಬಾದಾಮಿಯ ಪಿಕಾರ್ಡ ಬ್ಯಾಂಕ್ ಆವರಣದಲ್ಲಿ ತಾಲೂಕ ಆಡಳಿತ ವತಿಯಿಂದ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜಯಂತಿ ಕಾರ್ಯಕ್ರಮದಲ್ಲಿ ಆರುಂಧತಿ ಕಬ್ಬರಗಿ, ಮಬ್ರೂಮಕರ್ ಮತ್ತು ಲಮಾಣಿ ಅವರನ್ನು ಸನ್ಮಾನಿಸಲಾಯಿತು. ಪುರಸಭೆ ಅಧ್ಯಕ್ಷ ಪಾಂಡಪ್ಪ ಕಟ್ಟಿಮನಿ, ರಮೇಶ ಮೂಲಿಮನಿ, ಪ್ರಕಾಶ ನಾಯ್ಕರ್ ಮತ್ತಿತರರಿದ್ದಾರೆ.
Published on

ಬಾದಾಮಿ: ದೇಶದ ಸಂವಿಧಾನ ರಚಿಸಿ ಪ್ರತಿಯೊಬ್ಬರಿಗೂ ಸಾಮಾಜಿಕ, ರಾಜಕೀಯ, ಶೈಕ್ಷಣಿಕ ಹಕ್ಕುಗಳು ದೊರಕಿಸಿದ ಭಾರತ ರತ್ನ ಡಾ.ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನ ಹಬ್ಬವಾಗಬೇಕು ಎಂದು ಪುರಸಭೆ ಅಧ್ಯಕ್ಷ ಪಾಂಡಪ್ಪ ಕಟ್ಟಿಮನಿ ಹೇಳಿದರು.

ಪಟ್ಟಣದ ಪಿಕಾರ್ಡ ಬ್ಯಾಂಕ್ ಆವರಣದಲ್ಲಿ ತಾಲೂಕ ಆಡಳಿತ ವತಿಯಿಂದ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜನ ಸೇವೆ ಮಾಡುವ ಅವಕಾಶ ಎಲ್ಲ ವರ್ಗಕ್ಕೂ ಸಿಗಬೇಕು. ಎಲ್ಲರೂ ಜನಪ್ರತಿನಿಧಿಯಾಗಿ ಸೇವೆ ಸಲ್ಲಿಸಬೇಕು ಎಂದು ಸಂವಿಧಾನದ ಮೂಲಕ ಸರ್ವರಿಗೂ ಸಮಾನತೆ ಸಾರಿದ್ದರಿಂದ ನಾವೆಲ್ಲ ಇಂದು ಅಧಿಕಾರ ಪಡೆಯಲು ಸಾಧ್ಯವಾಗಿದೆ ಎಂದರು.

ಭಾರತೀಯ ಪುರಾತತ್ವ ಇಲಾಖೆ ಅಧಿಕಾರಿ ರಮೇಶ ಮೂಲಿಮನಿ, ವಾಲ್ಮೀಕಿ ಸಮಾಜದ ಅಧ್ಯಕ್ಷ ಪ್ರಕಾಶ ನಾಯ್ಕರ್ ಮಾತನಾಡಿದರು. ತಹಸೀಲ್ದಾರ್ ಮಧುರಾಜ್ ಕೆ. ಶಾಸಕ ಭೀಮಸೇನ್ ಚಿಮ್ಮನಕಟ್ಟಿ ಅವರ ಪತ್ರವನ್ನು ಓದಿದರು. ಪಿಯುಸಿಯಲ್ಲಿ ಜಿಲ್ಲೆಗೆ ಪ್ರಥಮ ಬಂದ ಆರುಂಧತಿ ಕಬ್ಬರಗಿ, ಮಬ್ರೂಮಕರ್ ಮತ್ತು ಲಮಾಣಿ ಅವರನ್ನು ತಾಲೂಕ ಆಡಳಿತದಿಂದ ಸನ್ಮಾನಿಸಿ ಗೌರವಿಸಲಾಯಿತು.

ಪುರಸಭೆ ಸದಸ್ಯೆ ರಾಮವ್ವ ಮಾದರ, ಪದ್ಮಾವತಿ ಕೆರಿಹೊಲದ, ಮಂಜುನಾಥ ಹೊಸಮನಿ, ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಮಹಾಂತೇಶ ಹಟ್ಟಿ, ಆರ್.ಎ್.ಬಾಗವಾನ, ಬಸವರಾಜ ಪಾತ್ರೋಟಿ, ಶಿವು ಮಣ್ಣೂರ, ಶ್ರೀಕಾಂತ ಸಬ್ನಿಸ್, ಅಶೋಕ ತಿತರಕನ್ನವರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net