ಶಾಲಾ ಪ್ರಾರಂಭೋತ್ಸವ ಹಬ್ಬದಂತೆ ಆಚರಿಸಿ

Celebrate the beginning of school like a festival
ಗುಳೇದಗುಡ್ಡದ ಸರಸ್ವತಿ ವಿದ್ಯಾಮಂದಿರ ಸಭಾಭವನದಲ್ಲಿ ನಡೆದ ಶಾಲಾ ಪ್ರಾರಂಭೋತ್ಸವದ ಪೂರ್ವಭಾವಿ ಸಭೆಯಲ್ಲಿ ಬಿಇಓ ಕೇಶವ ಪೆಟ್ಲೂರ ಮಾತನಾಡಿದರು. ಎಂ.ಬಿ.ದೊಡ್ಡಪ್ಪನ್ನವರ, ಬಿ.ಎಚ್.ಹಳಗೇರಿ, ಎಂ.ಸಿ.ನಾಲತವಾಡ, ಬಿ.ಎ್.ಕುಂಬಾರ, ಎಸ್.ಎಸ್.ಚೌಕದ ಇದ್ದರು.
Published on

ಗುಳೇದಗುಡ್ಡ: ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವ ಮೇ 28 ರಿಂದ ಆರಂಭವಾಗುತ್ತಿದ್ದು, ಪ್ರಾರಂಭೋತ್ಸವವನ್ನು ಹಬ್ಬದಂತೆ ಆಚರಣೆ ಮಾಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೇಶವ ವಾಮನ ಪೆಟ್ಲೂರ ಮುಖ್ಯಶಿಕ್ಷಕರಿಗೆ ಸೂಚನೆ ನೀಡಿದರು.

ಪಟ್ಟಣದ ಸರಸ್ವತಿ ವಿದ್ಯಾಮಂದಿರ ಸಭಾಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಟಗೇರಿ ಹಾಗೂ ಗುಳೇದಗುಡ್ಡ ವಲಯ ಮುಖ್ಯಶಿಕ್ಷಕರ ಶಾಲಾ ಪ್ರಾರಂಭೋತ್ಸವದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮೇ 28 ಮತ್ತು 29 ರಂದು ಶಾಲೆ, ಕೊಠಡಿ, ಆಟದ ಮೈದಾನ, ಶೌಚಾಲಯ ಸ್ವಚ್ಚತೆ ಮತ್ತಿತರ ಕಾರ್ಯಗಳ ತಯಾರಿ ಮಾಡಿಕೊಳ್ಳಿ. 30 ರಂದು ಶಾಲೆಗಳನ್ನು ತಳಿರು ತೋರಣದಿಂದ ಶೃಂಗರಿಸಿ, ಮಕ್ಕಳಿಗೆ ಸಿಹಿಯೂಟ ಬಡಿಸಿ ಎಸ್‌ಡಿಎಂಸಿ ಹಾಗೂ ಸಮುದಾಯದವರ ಸಹಯೋಗದೊಂದಿಗೆ ಅದ್ದೂರಿಯಾಗಿ ಆಚರಣೆ ಮಾಡಬೇಕು ಎಂದರು.

ಪಠ್ಯಪುಸ್ತಕ, ಸಮವಸ್ತ್ರ ವಿತರಣೆ ಮಾಡಿ ಮೇ 30 ರಿಂದ ಬೋಧನಾ ಪ್ರಕ್ರಿಯೆ ಪ್ರಾರಂಭವಾಗಬೇಕು. ಬಿಸಿಯೂಟ ಯೋಜನೆಯ ಬಗ್ಗೆ ದಾಖಲೆಗಳನ್ನು ನಿರ್ವಹಣೆ ಮಾಡಿ ಎಸ್‌ಎಟಿಎಸ್‌ನಲ್ಲಿ ಮಾಹಿತಿ ಕೇಂದ್ರೀಕರಿಸಬೇಕು ಹಾಗೂ ಅನಧೀಕೃತ ಕೋಚಿಂಗ್ ಸೆಂಟರ್‌ಗಳಲ್ಲಿ ಸರ್ಕಾರಿ ಶಾಲೆ ವಿದ್ಯಾರ್ಥಿಗಳು ದಾಖಲಾಗದಂತೆ ನೋಡಿಕೊಳ್ಳಬೇಕು ಎಂದರು.

ಕ್ಷೇತ್ರ ಸಮನ್ವಯಾಧಿಕಾರಿ ಎಂ.ಬಿ.ದೊಡ್ಡಪ್ಪನ್ನವರ ಮಾತನಾಡಿ, ಶಾಲಾ ಆರಂಭೋತ್ಸವ ವಿಭಿನ್ನವಾಗಿ ಮಾಡಬೇಕು. ಶಾಲಾ ವಾರ್ಷಿಕ ಯೋಜನೆ, ಶಾಲಾ ಅಭಿವೃದ್ಧಿ ಯೋಜನೆ ತಯಾರಿಸಿರಬೇಕು. ಶಿಕ್ಷಕರು ಪಾಠೋಪಕರಣ ಬಳಕೆ ಮಾಡಿ ಬೋಧನೆ ಮಾಡಬೇಕು. ಮಕ್ಕಳ ರಕ್ಷಣೆ ಬಗ್ಗೆ ಕಾಳಜಿ ವಹಿಸಬೇಕು. ವಿದ್ಯುತ್ ಅವಘಡ, ಅಚಾತುರ್ಯಗಳು ಜರುಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಿ. ಶಾಲಾ ಆಸ್ತಿ ಗಣಕೀಕರಣ ಮಾಡಿಸಬೇಕು ಎಂದರು.

ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಬಿ.ಎಚ್.ಹಳಗೇರಿ, ಶಿಕ್ಷಣ ಸಂಯೋಜಕ ಎಂ.ಸಿ.ನಾಲತವಾಡ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಬಿ.ಎ್.ಕುಂಬಾರ, ಎಸ್.ಎಸ್.ಚೌಕದ ಮಾತನಾಡಿದರು.

ಉಪಪ್ರಾಚಾರ್ಯ ಎಂ.ಪಿ.ಮಾಗಿ, ಆಡಿನ ಶಾಲೆಯ ಮುಖ್ಯಶಿಕ್ಷಕ ವಿ.ಪಿ. ದೊಡಮನಿ, ಎಸ್.ಬಿ.ಪಟ್ಟಣಶೆಟ್ಟಿ, ಎಸ್.ಎಸ್. ಯಲಿಗಾರ, ಆರ್.ಎ.ತಿರಕಪ್ಪನವರ, ಎಸ್.ವಿ ಯಲಿಗಾರ, ಆರ್.ಜಿ. ಹುನಗುಂದ, ಬಿ.ಎನ್. ಆಲೂರ, ಜಿ.ಎಂ. ಬುಳ್ಳಾ, ವೈ.ಎಸ್. ಮಜ್ಜಗಿ, ಎಂ.ಎಸ್. ಉಂಕಿ, ಎಸ್.ಎಂ. ಮಡಿವಾಳರ, ಎಚ್.ಆರ್. ಕಡವಾಲ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net