

ಬೀಳಗಿ: ಪಟ್ಟಣದ ತಾಲೂಕು ಆಡಳಿತದಿಂದ ಜ.26 ರಂದು ಗಣರಾಜ್ಯೋತ್ಸವವನ್ನು ಅಚ್ಚುಕಟ್ಟಾಗಿ, ಅದ್ದೂರಿಯಾಗಿ ಆಚರಿಸಬೇಕೆಂದು ತಹಸೀಲ್ದಾರ್ ವಿನೋದ ಹತ್ತಳ್ಳಿ ಸೂಚಿಸಿದರು.
ಸ್ಥಳೀಯ ತಹಸೀಲ್ದಾರ್ ಕಚೇರಿ ಸಭಾಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪಟ್ಟಣದ ಗ್ರಾಮ ಚಾವಡಿಯಲ್ಲಿ ಬೆಳಗ್ಗೆ 7.45 ಗಂಟೆಗೆ ಶಾಸಕ ಜೆ.ಟಿ. ಪಾಟೀಲ ಧ್ವಜಾರೋಹಣ ನೆರವೇರಿಸುವರು.
ವಿಧಾನ ಪರಿಷತ್ ಶಾಸಕರಾದ ಎಚ್.ಆರ್. ನಿರಾಣಿ ಮತ್ತಿತರರು ಆಗಮಿಸುವರು. ಚವಡಿಯಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ಬಾಬಾ ಜಗಜೀವನ್‌ರಾಮ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಮಹಾತ್ಮಾ ಗಾಂಧೀಜಿ ಮೂರ್ತಿಗಳಿಗೆ ಪುಷ್ಪ ನಮನ ಹಾಗೂ ನಂತರ ತಹಸೀಲ್ದಾರ್ ಕಚೇರಿಯಲ್ಲಿ 9ಗಂಟೆಗೆ ನಡೆಯುವ ಕಾರ್ಯಕ್ರಮ ನಡೆಯಲಿದೆ. ಬಳಿಕ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿ ಕಾರ್ಯಕ್ರಮಗಳು, ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.
ಪಪಂ ಮುಖ್ಯಾಧಿಕಾರಿ ದೇವೇಂದ್ರ ಧನಪಾಲ, ಹೇಸ್ಕಾಂ ಎಇಇ ಮಂಜುನಾಥ ಬೋಕಿ, ಸಿಡಿಪಿಒ ಬಿ. ಜಿ. ಕವಟೇಕರ, ಬಿ.ಆರ್.ಸಿ. ಶಿವಾಜಿ ಕಾಂಬಳೆ, ತಾಪಂ ಅಧಿಕಾರಿ ಸಿದ್ದು ನಕ್ಕರಗುಂದಿ, ಅಬಕಾರಿ ಅಧಿಕಾರಿ ಸುನೀಲ ಹೂಗಾರ, ವಸಂತ ನಾಯಕ, ಪುಂಡಲೀಕ ಲಮಾಣಿ, ಸಹಾಯ ಕೃಷಿ ಕೃಷಿ ನಿರ್ದೇಶಕ ಶ್ರೀನಿವಾಸ ಪಾಟೀಲ, ನೋಂದಣಿ ಅಧಿಕಾರಿ ಮುಂಡರಗಿ, ಕಂದಾಯ ಇಲಾಖೆ ಶಿರಸ್ತೇದಾರ ಮಂಜುನಾಥ ಧರೆಗೊಂಡ, ಟಿಎಪಿಸಿಎಂಎಸ್ ಮಲ್ಲಪ್ಪ ಕಾಳಗಿ, ಮಹಾದೇವ ಹಾದಿಮನಿ, ಬಸವರಾಜ ಹಳ್ಳದಮನಿ, ಬಸವರಾಜ ಭಜಂತ್ರಿ ಇತರರಿದ್ದರು.