ಶಾಂತಿಯುತವಾಗಿ ಹೋಳಿ-ರಂಜಾನ್ ಆಚರಿಸಿ

mdl holi ramdan meet
ಹೋಳಿ ಹಾಗೂ ರಂಜಾನ್ ಹಬ್ಬ ನಿಮಿತ್ತ ಮುದಗಲ್‌ನ ಪೊಲೀಸ್ ಠಾಣೆ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಶಾಂತಿ ಸಭೆಯಲ್ಲಿ ಸಿಪಿಐ ಬಾಲಚಂದ್ರ ಲಕ್ಕಂ ಮಾತನಾಡಿದರು. ಪಿಎಸ್‌ಐ ವೆಂಕಟೇಶ ಮಾಡಗೇರಿ ಇದ್ದರು.
Published on

ಮುದಗಲ್: ಹೋಳಿ ಮತ್ತು ರಂಜಾನ್ ಹಬ್ಬ ಒಟ್ಟಿಗೆ ಬಂದಿರುವುದರಿಂದ ಹಿಂದು ಮತ್ತು ಮುಸ್ಲಿಮರು ಶಾಂತಿಯುತವಾಗಿ ಆಚರಿಸಬೇಕು ಎಂದು ಮಸ್ಕಿ ಸಿಪಿಐ ಬಾಲಚಂದ್ರ ಲಕ್ಕಂ ಹೇಳಿದರು.

ಪಟ್ಟಣದ ಪೊಲೀಸ್ ಠಾಣೆಯಲ್ಲಿ ಶನಿವಾರ ಸಂಜೆ ಹಮ್ಮಿಕೊಂಡಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದರು. ಹಬ್ಬಗಳನ್ನು ಪ್ರೀತಿ, ವಿಶ್ವಾಸ, ಸೌಹಾರ್ದದಿಂದ ಆಚರಿಸಬೇಕು. ಬಣ್ಣದಾಟ ಆಡಿದ ಬಳಿಕ ಸ್ನಾನಕ್ಕೆಂದು ಹೊಳೆ, ಕೆರೆ, ಕಾಲುವೆಗೆ ಇಳಿಯುವಾಗ ಎಚ್ಚರವಹಿಸಬೇಕು. ರಂಜಾನ್ ಹಬ್ಬವನ್ನು ಶಾಂತಿಯುತವಾಗಿ ಆಚರಿಸುವ ಮೂಲಕ ಸಹಕಾರ ನೀಡಬೇಕು ಎಂದು ಕೋರಿದರು.

ಪಿಯುಸಿ ಪರೀಕ್ಷೆ ಇದ್ದು, ವಿದ್ಯಾರ್ಥಿಗಳಿಗೆ ಬಲವಂತವಾಗಿ ಬಣ್ಣ ಎರಚಬಾರದು. ಸಣ್ಣಪುಟ್ಟ ಸಮಸ್ಯೆ ಇದ್ದರೆ ದೊಡ್ಡದು ಮಾಡದಂತೆ ಹಿರಿಯರು ಯುವಕರಿಗೆ ಬುದ್ಧಿಹೇಳಬೇಕು ಎಂದರು. ಪ್ರಮುಖರಾದ ಗುರುಬಸಪ್ಪ ಸಜ್ಜನ್, ಪುರಸಭೆ ಸದಸ್ಯ ಗುಂಡಪ್ಪ ಗಂಗಾವತಿ, ಮುಸ್ಲಿಂ ಧರ್ಮಗುರು ಮೌಲಾನಾ ಮಾತನಾಡಿದರು. ಮುಖಂಡರಾದ ನಿಸಾರ ಅಹ್ಮದ್, ಮಾಸುಂ ಷರೀಫ್, ಮಲ್ಲಪ್ಪ ಹೂಗಾರ, ಸಂಗಪ್ಪ ಹಿರೇಮನಿ, ಹೇಮಂತ ನಾಗಲಾಪುರ, ವಿನೋದಕುಮಾರ, ನಂದಪ್ಪ ಕತ್ತಿ, ಮಹಿಬೂಬಸಾಬ್ ಹಳೆಪೇಟೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net