ನವೆಂಬರ್ 7ನ್ನು ವಿದ್ಯಾರ್ಥಿಗಳ ದಿನವಾಗಿ ಆಚರಿಸಿ

Celebrate November 7 as Students' Day
ತಾಳಿಕೋಟೆ ತಹಸೀಲ್ದಾರ್ ಕೀರ್ತಿ ಚಾಲಕ ಅವರಿಗೆ ದಲಿತ ಸೇನೆ ಸಂಘಟನೆಯ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಎಂ.ಎ. ಸಿಂದಗೀಕರ, ಸುಭಾಸ ತಳವಾರ, ಸಾಯಬಣ್ಣ ಹರಿಜನ, ವಿರೇಶ ಗುಳಬಾಳ ಇತರರಿದ್ದರು.
Published on

ತಾಳಿಕೋಟೆ: ಭಾರತದ ಭವಿಷ್ಯವನ್ನು ಉದ್ಧರಿಸಿದ ಮಾನವತಾವಾದಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಶಾಲೆಗೆ ಸೇರಿದ ದಿನವಾದ ನ. 7ನ್ನು ವಿದ್ಯಾರ್ಥಿಗಳ ದಿನವನ್ನಾಗಿ ಆಚರಿಸಲು ಸರ್ಕಾರವು ಆದೇಶಿಸಬೇಕು ಎಂದು ದಲಿತ ಸೇನೆ ಸಂಘಟನೆಯ ಪದಾಧಿಕಾರಿಗಳು ತಹಸೀಲ್ದಾರ್ ಮೂಲಕ ಸಿಎಂಗೆ ಮನವಿ ಸಲ್ಲಿಸಿದ್ದಾರೆ.

ಡಾ. ಅಂಬೇಡ್ಕರರವರು ಶಾಲೆಗೆ ಸೇರುವ ಮೂಲಕ ಭಾರತದ ಸಾಮಾಜಿಕ, ಆರ್ಥಿಕ ಸೇರಿ ಅನೇಕ ಬದಲಾವಣೆಗಳನ್ನು ಮಾಡುವಂತಹ ಶಿಕ್ಷಣ ಪಡೆಯಲು ತಳಪಾಯ ಹಾಕಿದ ದಿನ ನ. 7. ಡಾ. ಅಂಬೇಡ್ಕರ್ ಅವರು 1900 ನವೆಂಬರ್ 7ರಂದು ಮಹಾರಾಷ್ಟ್ರದ ಸಾತಾರಾ ಜಿಲ್ಲೆಯ ಪ್ರಧಾಬಸಿಂಗ್ ಹೈಸ್ಕೂಲ್ ಶಾಲೆಗೆ ಸೇರುತ್ತಾರೆ. ಅಂದಿನ ದಿನಗಳಲ್ಲಿ ಸಾಮಾಜಿಕ ದೌರ್ಜನ್ಯ, ಅಸ್ಪಶ್ಯತೆಯಂತಹ ಅನಿಷ್ಠ ಪದ್ಧತಿಗಳನ್ನು ತಮ್ಮ ಬಾಲ್ಯದಲ್ಲಿ ಅನುಭವಿಸಿಕೊಂಡು ಬೆಳೆದರು. ಅದರ ವಿರುದ್ಧ ಧ್ವನಿ ಎತ್ತಲು ಆರಂಭಿಸಿದರು. ಮಹಾರಾಷ್ಟ್ರ ಸರ್ಕಾರ ಈಗಾಗಲೇ ನ. 7ನ್ನು ವಿದ್ಯಾರ್ಥಿಗಳ ದಿನವನ್ನಾಗಿ ಆಚರಿಸಲು ನಿರ್ಧರಿಸಿದೆ. ಅದೇ ಮಾದರಿಯಲ್ಲಿ ರಾಜ್ಯದಲ್ಲಿಯೂ ಆದೇಶಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ದಲಿತ ಸೇನೆ ಸಂಘಟನೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಎಂ.ಎ. ಸಿಂದಗೀಕರ, ಜಿಲ್ಲಾ ಉಪಾಧ್ಯಕ್ಷ ಸುಭಾಸ ತಳವಾರ, ತಾಲೂಕಾಧ್ಯಕ್ಷ ಸಾಯಬಣ್ಣ ಹರಿಜನ, ಹುಣಸಗಿ ತಾಲೂಕಾಧ್ಯಕ್ಷ ವಿರೇಶ ಗುಳಬಾಳ, ಮಹೇಶ ಚಲವಾದಿ, ಗುರುಪ್ರಸಾದ ಬಿ.ಜಿ., ದೇವು ಗೋಟಗುಣಕಿ, ಬಸ್ಸು ಬಿಸನಾಳ, ನಿಂಗಣ್ಣ ಮಾಯವಂಶಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net