ಸೌಹಾರ್ದದಿಂದ ಮೊಹರಂ ಆಚರಿಸಿ

08 LXR-1
Published on

ಲಕ್ಷ್ಮೇಶ್ವರ: ಪಟ್ಟಣವು ಸದಾ ಸೌಹಾರ್ದದಿಂದ ಸಾಗಿ ಬಂದು ಈ ಭಾಗದಲ್ಲಿಯೇ ಭಾವೈಕ್ಯದ ನಗರವಾಗಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಹಿಂದು- ಮುಸ್ಲಿಮರು ಶಾಂತಿಯುತವಾಗಿ ಮೊಹರಂ ಆಚರಿಸಬೇಕು ಎಂದು ಪಿಎಸ್‌ಐ ಈರಪ್ಪ ರಿತ್ತಿ ಹೇಳಿದರು.
ಭಾನುವಾರ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಮೊಹರಂ ಶಾಂತಿ ಸಭೆಯಲ್ಲಿ ಅವರು ಮಾತನಾಡಿ, ಜಾತಿ, ಮತದ ತಾರತಮ್ಯ ಮಾಡದೆ ಒಗ್ಗಟ್ಟಾಗಿ ಹಬ್ಬವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಪಟ್ಟಣದ ಜನ ಶಾಂತಿ, ಸೌಹಾರ್ದಕ್ಕೆ ವಿಶೇಷ ಒತ್ತು ಕೊಡುತ್ತಿದ್ದಾರೆ.ಪೊಲೀಸ್ ಇಲಾಖೆ ಜತೆ ಅತ್ಯುತ್ತಮ ಸಂಬಂಧವನ್ನು ಜನತೆ ಇಟ್ಟುಕೊಂಡಿದ್ದಾರೆ. ಮೊಹರಂ ಹಬ್ಬವನ್ನು ಶಾಂತಿ, ಸೌಹಾರ್ದದಿಂದ ಮಾಡಬೇಕು ಎಂದು ಹೇಳಿದರು. ಪಟ್ಟಣದ ಪ್ರಮುಖರಾದ ಮಹೇಶ ಹೊಗೆಸೊಪ್ಪಿನ, ಪೂರ್ಣಾಜಿ ಖರಾಟೆ, ಸುರೇಶ ನಂದೆಣ್ಣವರ, ಅಂಜುಮನ್ ಕಮಿಟಿ ಅಧ್ಯಕ್ಷ ಎಂ.ಎಂ. ಮಾತನಾಡಿದರು. ಅಪರಾಧ ವಿಭಾಗದ ಪಿಎಸ್‌ಐ ವಿ.ಜಿ. ಪವಾರ, ದೂಧ್ ನಾನಾ ದರ್ಗಾ ಕಮಿಟಿ ಅಧ್ಯಕ್ಷ ಸುಲೇಮಾನ ಸಾಬ್ ಕಣಕೆ, ದಾದಾಪಿರ ಕಾರಡಗಿ, ಅನಿಲ ಮುಳಗುಂದ, ಮಾಬುಸಾಬ್ ಮುಳುಗುಂದ, ವೀರಭದ್ರಪ್ಪ ಅರಿಶಿಣದ, ಗಂಗಾಧರ ಸೂರಣಗಿ, ಬಸವರಾಜ ಕಲ್ಲೂರ, ಶಿವಾನಂದ ಲಿಂಗಶೆಟ್ಟಿ, ಜಿಲಾನಿ ಶಿದ್ದಿ, ರಮೇಶ ಹಂಗನಕಟ್ಟಿ, ಜಹಿರ ಅಹ್ಮದ ಸಿದ್ದಾಪುರ, ನೂರಅಹ್ಮದ ನಿಡಗುಂದಿ, ನೂರಅಹ್ಮದ ಮಕಾನದಾರ, ಮಹಮ್ಮ ರಫೀಕ ಸಿದ್ದಾಪುರ, ಯಾಕೂಬ್ ಕಾರಡಗಿ, ಸಾಧಿಕ್ ಸಮಲೆವಾಲೆ, ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net