ಸೌಹಾರ್ದದಿಂದ ಹೋಳಿ ಆಚರಿಸಿ

Celebrate Holi with harmony.
ಹುನಗುಂದ ಪೊಲೀಸ್ ಠಾಣೆಯಲ್ಲಿ ಆಯೋಜಿಸಿದ್ದ ಶಾಂತಿ ಪಾಲನಾ ಸಭೆಯಲ್ಲಿ ಸಿಪಿಐ ಸುನೀಲ ಸವದಿ ಮಾತನಾಡಿದರು. ಪಿಎಸ್‌ಐ ಪ್ರಕಾಶ ಡಿ. ಇದ್ದಾರೆ.
Published on

ಹುನಗುಂದ: ಬಸವಣ್ಣನವರು, ಚಿತ್ತರಗಿ ವಿಜಯಮಹಾಂತೇಶ ಹಾಗೂ ಮುರ್ತುಜಾ ಖಾದ್ರಿಯವರು ನಡೆದಾಡಿದ ಪುಣ್ಯಭೂಮಿ ಇದಾಗಿದ್ದು, ರಂಜಾನ್ ಮತ್ತು ಹೋಳಿ ಹಬ್ಬವನ್ನು ಹಿಂದು-ಮುಸ್ಲಿಮರು ಶಾಂತಿ ಸೌಹಾರ್ದದಿಂದ ಆಚರಿಸಬೇಕು ಎಂದು ಹುನಗುಂದ ಸಿಪಿಐ ಸುನೀಲ ಸವದಿ ಹೇಳಿದರು.

ಪಟ್ಟಣದ ಪೊಲೀಸ್ ಠಾಣೆಯಲ್ಲಿ ಭಾನುವಾರ ಆಯೋಜಿಸಿದ್ದ ಶಾಂತಿ ಪಾಲನಾ ಸಭೆಯಲ್ಲಿ ಅವರು ಮಾತನಾಡಿದರು.

ಪಿಎಸ್‌ಐ ಪ್ರಕಾಶ ಡಿ. ಮಾತನಾಡಿ, ಹುನಗುಂದ ಮತಕ್ಷೇತ್ರ ಶಾಂತಿ ಸೌಹಾರ್ದಕ್ಕೆ ಹೆಸರುವಾಸಿಯಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸ್ ಇಲಾಖೆಯೊಂದಿಗೆ ಸಾರ್ವಜನಿಕರು ಸಹಕರಿಸಬೇಕು ಎಂದರು.

ಮುಖಂಡ ಅಮರೇಶ ನಾಗೂರ ಮಾತನಾಡಿ, ಹೋಳಿ ಹಾಗೂ ರಂಜಾನ್ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳುತ್ತೇವೆ ಎಂದರು.

ಸಂಗಮೇಶ್ವರ ದೇವಸ್ಥಾನ ಕಮಿಟಿ ಅಧ್ಯಕ್ಷ ಶೇಖರಪ್ಪ ಬಾದವಾಡಗಿ, ಮಹಾಂತೇಶ ಹಳ್ಳೂರ, ಮೆಹಬೂಬ ಸರಕಾವಸ, ಮಹೇಶ ಬೆಳ್ಳಿಹಾಳ, ಮಹಾಂತೇಶ ಅವಾರಿ, ಇಸ್ಲಾಂ ಕಮಿಟಿ ಸದಸ್ಯ ಪರವೇಜ ಖಾಜಿ, ಬಸವರಾಜ ಹೊಸಮನಿ ಮಾತನಾಡಿದರು. ಮಲ್ಲಿಕಾರ್ಜುನ ಚೂರಿ, ಸಾಂತಪ್ಪ ಹೊಸಮನಿ, ಮಹಾಂತೇಶ ಮದರಿ, ರಾಮನಗೌಡ ಬೆಳ್ಳಿಹಾಳ, ಚಂದ್ರು ತಳವಾರ, ಮುನ್ನಾ ಬಾಗವಾನ, ಮೈನು ಧನ್ನೂರ, ಶರಣಗೌಡ ಅರಸಿಬೀಡಿ, ಮಲ್ಲಪ್ಪ ಸುಂಕದಕಟ್ಟಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net