ಶಾಂತಿಯುತವಾಗಿ ಹೋಳಿ, ರಂಜಾನ್ ಆಚರಿಸಿ

Celebrate Holi and Ramadan peacefully
ಇಳಕಲ್ಲ ಪೊಲೀಸ್ ಠಾಣೆಯಲ್ಲಿ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ಸಿಪಿಐ ಸುನೀಲ ಸವದಿ ಮಾತನಾಡಿದರು. ಪಿಎಸ್‌ಐ ಎಸ್.ಆರ್. ನಾಯಕ ಇದ್ದಾರೆ.
Published on

ಇಳಕಲ್ಲ(ಗ್ರಾ): ಹೋಳಿ ಹಾಗೂ ರಂಜಾನ್ ಹಬ್ಬಗಳನ್ನು ಶಾಂತಿಯುತವಾಗಿ ಆಚರಿಸಬೇಕು ಎಂದು ಸಿಪಿಐ ಸುನೀಲ ಸವದಿ ಹೇಳಿದರು.

ನಗರದ ಪೊಲೀಸ್ ಠಾಣೆಯಲ್ಲಿ ಭಾನುವಾರ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಕಾಮನಮೂರ್ತಿಗಳನ್ನು ಇಡುವ ನೆಪದಲ್ಲಿ ಒತ್ತಾಯಪೂರ್ವಕವಾಗಿ ದೇಣಿಗೆ ವಸೂಲಿ ಮಾಡುವುದು, ಸಮಯ ಮೀರಿ ಹಲಗೆ ಬಡಿಯುವುದು, ಪಿಯು ಪರೀಕ್ಷೆ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ತೊಂದರೆ ನೀಡುವುದು ಕಂಡು ಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಶಹರ ಪೊಲೀಸ್ ಠಾಣೆ ಪಿಎಸ್‌ಐ ಎಸ್.ಆರ್. ನಾಯಕ ಮಾತನಾಡಿದರು. ಮಹೇಶ ಪಾಟೀಲ, ಯಲ್ಲಪ್ಪ ಪೂಜಾರಿ, ನಗರಸಭೆ ಸದಸ್ಯ ಗುರುದತ್ತಾತ್ರೇಯ ಗುಳೇದ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net